See also 2incarnate
1incarnate ಇನ್‍ಕಾರ್ನಟ್‍
ಗುಣವಾಚಕ
  1. (ವ್ಯಕ್ತಿ, ಭೂತ ಪ್ರೇತ, ಗುಣ, ಮೊದಲಾದವುಗಳ ವಿಷಯದಲ್ಲಿ) (ಮುಖ್ಯವಾಗಿ ಮನುಷ್ಯರೂಪದಲ್ಲಿ) ಮೈವೆತ್ತ; ಮೈದಾಳಿದ; ಮೂರ್ತಿಮಂತ; ಮೂರ್ತಿಮತ್ತಾದ; ಮೂರ್ತೀಭವಿಸಿದ; ಅವತರಿಸಿದ: he is an incarnate fiend ಅವನೊಬ್ಬ ಮೂರ್ತಿಮತ್ತಾದ ದೆವ್ವ. liberty incarnate ಮೈವೆತ್ತ ಸ್ವಾತಂತ್ರ್ಯ.
  2. (ಭೂತಕೃದಂತದಲ್ಲಿ) ಗಮನಾರ್ಹವಾದ ಯಾ ಅತ್ಯಂತ ಪರಿಪೂರ್ಣ ರೂಪದಲ್ಲಿ ಮೈದಾಳಿದ, ಮೂರ್ತೀಭವಿಸಿದ.
See also 1incarnate
2incarnate ಇನ್‍ಕಾರ್ನೇಟ್‍
ಸಕರ್ಮಕ ಕ್ರಿಯಾಪದ
  1. ಅವತರಿಸು; ಮೈದಾಳುವಂತೆ, ಮೂರ್ತಿಮತ್ತಾಗಿ ಮಾಡು.
  2. (ಭಾವನೆ, ಭಾವ, ಮೊದಲಾದವಕ್ಕೆ) ರೂಪಕೊಡು; ಮೂರ್ತೀಕರಿಸು.
  3. (ವ್ಯಕ್ತಿ ಮೊದಲಾದವುಗಳ ವಿಷಯದಲ್ಲಿ, ಒಂದು ಗುಣದ) ಸಜೀವ ಮೂರ್ತಿಯಾಗಿರು; ಜೀವಂತರೂಪವಾಗಿರು; ಅವತಾರವಾಗಿರು: a wife who incarnates all the virtues ಎಲ್ಲ ಸದ್ಗುಣಗಳನ್ನೂ ತನ್ನಲ್ಲೇ ಮೂರ್ತೀಕರಿಸಿಕೊಂಡಿರುವ ಧರ್ಮಪತ್ನಿ.