impulse ಇಂಪಲ್ಸ್‍
ನಾಮವಾಚಕ
  1. ಮುಂದೊತ್ತುವುದು; ಥಟ್ಟನೆ ನೂಕುವುದು; ಚಿಮ್ಮುವಿಕೆ; ರಭಸದ ನೂಕಲು.
  2. ಒಳಪ್ರೇರಣೆ; ಅಂತಃಪ್ರೇರಣೆ; ಅಂತಃಪ್ರಚೋದನೆ; ಮನಸ್ಸಿನ ಪ್ರಚೋದನೆ; ಆಂತರಿಕ ಆವೇಗ.
  3. (ಭೌತವಿಜ್ಞಾನ) ಆವೇಗ; ಅತ್ಯಲ್ಪಕಾಲ ಪ್ರಯೋಗವಾಗಿ ಸಾಂತ ಆವೇಗ ವ್ಯತ್ಯಾಸವನ್ನುಂಟುಮಾಡುವ ಅಧಿಕ ಪ್ರಮಾಣದ ಬಲ.
  4. (ಸ್ನಾಯುವಿನಲ್ಲಿ ಕ್ರಿಯೆಯನ್ನೋ ತಾಟಸ್ಥ್ಯವನ್ನೋ ಉಂಟುಮಾಡುವಂತೆ ನರದಲ್ಲಿ ಆಗುವ) ಉದ್ರೇಕ(ದ ಅಲೆ).
  5. ಉದ್ರೇಕ; ಕೆರಳುವಿಕೆ; ಮನಸ್ಸು ಉದ್ರೇಕಗೊಳ್ಳುವುದು.
  6. (ಯೋಚನೆ ಮಾಡದೆ, ಥಟ್ಟನೆ ಕೆಲಸ ಮಾಡುವ) ಹಠಾತ್ತಾದ ಪ್ರವೃತ್ತಿ: did it on (an) impulse ಹಠಾತ್‍ ಪ್ರವೃತ್ತಿಯಿಂದ ಮಾಡಿದನು.
  7. ಚಾಲಕಶಕ್ತಿ; ಪ್ರಚೋದನೆ; ಯಾವುದನ್ನೇ ಚಲಿಸುವಂತೆ ಮಾಡುವ ಶಕ್ತಿ.