improve ಇಂಪ್ರೂವ್‍
ಸಕರ್ಮಕ ಕ್ರಿಯಾಪದ
  1. ಮೇಲ್ಪಡಿಸು; ಉತ್ತಮಗೊಳಿಸು; ಸುಧಾರಿಸು; ತಿದ್ದು; ಅಭಿವೃದ್ಧಿಪಡಿಸು.
  2. (ಸಂದರ್ಭವನ್ನು, ಅವಕಾಶವನ್ನು) ಸದುಪಯೋಗಪಡಿಸಿಕೊ; ಸರಿಯಾಗಿ ಬಳಸಿಕೊ; ಲಾಭದಾಯಕವಾಗಿ ಮಾಡಿಕೊ: improved the opportunity to make friends ಆ ಅವಕಾಶವನ್ನು ಹೊಸ ಸ್ನೇಹಿತರನ್ನು ಮಾಡಿಕೊಳ್ಳಲು ಬಳಸಿಕೊಂಡ.
  3. (ಸೌಕರ್ಯಗಳನ್ನು ಕಲ್ಪಿಸಿ, ಅಭಿವೃದ್ಧಿಗೊಳಿಸಿ ಮನೆ, ಜಈನು, ಮೊದಲಾದವುಗಳ) ಬೆಲೆ ಹೆಚ್ಚಿಸು.
  4. (ವರ್ತಮಾನ ಕೃದಂತದಲ್ಲಿ) ನೈತಿಕವಾಗಿ ಸುಧಾರಿಸುವ: an improving book ನೈತಿಕವಾಗಿ ಸುಧಾರಿಸುವ ಪುಸ್ತಕ.
ಅಕರ್ಮಕ ಕ್ರಿಯಾಪದ
  1. ಮೇಲಾಗು; ಉತ್ತಮವಾಗು; ಅಭಿವೃದ್ಧಿಯಾಗು.
  2. (ಬೆಲೆ, ಗುಣ, ಮೊದಲಾದವುಗಳಲ್ಲಿ) ಏರು; ಹೆಚ್ಚಾಗು; ಅಭಿವರ್ಧಿಸು.
ನುಡಿಗಟ್ಟು
  1. improve away ಕುಂದುಕೊರತೆಗಳನ್ನು ತೊಲಗಿಸಿ ಉತ್ತಮಗೊಳಿಸು: improve away one’s profit ಬಂದ ಲಾಭವನ್ನು ಉತ್ತಮಗೊಳಿಸುವುದರಲ್ಲಿ ಕಳೆದುಕೊ.
  2. improve on (or upon) (ಇದ್ದುದನ್ನು) ಅಭಿವೃದ್ಧಿಗೊಳಿಸು; ಉತ್ತಮಪಡಿಸು; ಇದ್ದುದಕ್ಕಿಂತಲೂ ಚೆನ್ನಾಗಿ ಮಾಡು; ಕಳೆಯೇರಿಸು: he improved upon the original story ಆತ ಮೂಲಕಥೆಯ ಕಳೆಯೇರಿಸಿದ.
  3. improve the occasion ಸದುಪಯೋಗಕ್ಕಾಗಿ ಯಾ ಧರ್ಮೋಪದೇಶ ಮಾಡಲು ಸಂದರ್ಭವನ್ನು ಬಳಸಿಕೊ.