See also 2imprint
1imprint ಇಂಪ್ರಿಂಟ್‍
ನಾಮವಾಚಕ

ಮುದ್ರೆ; ಅಚ್ಚು; ಅಂಕಿತ; ಗುರುತು; ಚಿಹ್ನೆ (ರೂಪಕವಾಗಿ ಸಹ): he has left the imprint of his thought on all his works ಅವನು ತನ್ನ ಎಲ್ಲ ಕೃತಿಗಳ ಮೇಲೆಯೂ ತನ್ನ ಚಿಂತನೆಯ ಮುದ್ರೆ ಬಿಟ್ಟು ಹೋಗಿದ್ದಾನೆ.

ಪದಗುಚ್ಛ
  1. printer’s imprint ಮುದ್ರಕರ ಮುದ್ರೆ; ಅಚ್ಚುಗರ ಅಂಕಿತ.
  2. publisher’s imprint ಪ್ರಕಾಶಕನ ಮುದ್ರೆ; ಪುಸ್ತಕದ ಹೆಸರಿನ ಪುಟದಲ್ಲಾಗಲಿ ಕೊನೆಯಲ್ಲಾಗಲಿ ಅಚ್ಚುಮಾಡುವ ಪ್ರಕಾಶಕರ ಹೆಸರು, ವಿಳಾಸ, ಮೊದಲಾದವನ್ನು ತಿಳಿಸುವ ಮುದ್ರೆ.
See also 1imprint
2imprint ಇಂಪ್ರಿಂಟ್‍
ಸಕರ್ಮಕ ಕ್ರಿಯಾಪದ
  1. (ಚಿತ್ರ ಮೊದಲಾದವುಗಳ) ಮುದ್ರೆಯೊತ್ತು; ಅಚ್ಚೊತ್ತು; ಠಸ್ಸೆಯೊತ್ತು.
  2. (ಭಾವನೆ ಮೊದಲಾದವನ್ನು) ಮನಸ್ಸಿನ – ಮೇಲೆ ಅಚ್ಚೊತ್ತು, ನಾಟಿಸು, ಮುದ್ರೆಯೊತ್ತು; ಮನದಟ್ಟು ಮಾಡು.
  3. (ಯಾವುದೇ ವಸ್ತುವಿನ ಯಾ ವ್ಯಕ್ತಿಯ ಮೇಲೆ ಅವುಗಳ ಯೋಗ್ಯತೆ, ಗುಣ, ಮೊದಲಾದವನ್ನು) ಮುದ್ರೆಯೊತ್ತು; ಅಚ್ಚೊತ್ತು.
  4. (ವಸ್ತುವಿನ ಮೇಲೆ) ಚಿತ್ರ ಒತ್ತು; ಚಿತ್ರದ ಗುರುತು ಹಾಕು.
  5. (ಮನಶ್ಶಾಸ್ತ್ರ) ಆಪ್ತವಾಗು; ಪ್ರಿಯ(ವಸ್ತು)ವಾಗು; ಮುಖ್ಯವಾಗಿ ಎಳೆಯ ಪ್ರಾಣಿಗೆ ಆಪ್ತ ಯಾ ಪ್ರಿಯಬಂಧುವೆಂದು ತೋರುವಂತೆ ಆಗು: the parent fish may become imprinted to the young as well as the young to the parent ತಾಯಿಈನು ಮರಿಗೆ ಆಪ್ತವಾಗಬಹುದಾದಂತೆಯೇ ಮರಿಯೂ ತಾಯಿಗೆ ಆಗಬಹುದು.
  6. (ಮನಶ್ಶಾಸ್ತ್ರ) ಆಪ್ತವಾಗಿಸು; ಪ್ರಿಯವಸ್ತುವಾಗಿಸು; ಮುಖ್ಯವಾಗಿ ಎಳೆಯ ಮರಿಯೊಂದು ಬೇರೊಂದು ಪ್ರಾಣಿಯನ್ನು ಯಾ ವಸ್ತುವನ್ನು ತನ್ನ ಆಪ್ತ ಯಾ ಪ್ರಿಯಬಂಧುವಾಗಿ ಕಾಣುವಂತೆ ಒಗ್ಗಿಸು: we took ducklings from their natural mother and tried to imprint them to humans ಬಾತಿನ ಮರಿಗಳನ್ನು ಹೆತ್ತ ತಾಯಿಯಿಂದ ಬಿಡಿಸಿ ಅವುಗಳಿಗೆ ಮನುಷ್ಯರನ್ನು ಆಪ್ತವಾಗಿಸಿದೆವು.