impression ಇಂಪ್ರೆಷನ್‍
ನಾಮವಾಚಕ
  1. ಅಂಕನ; ಗುರುತು, ಮುದ್ರೆ, ಠಸ್ಸೆ – ಹಾಕುವುದು, ಒತ್ತುವುದು.
  2. (ಆ ರೀತಿ ಒತ್ತಿದ) ಠಸ್ಸೆ; ಛಾಪು; ಮೊಹರು; ಗುರುತು; ಚಿಹ್ನೆ.
  3. (ಮುದ್ರಿತ) ಪ್ರತಿ; ಮುದ್ರಣದ ಮೊಳೆಗಳಿಂದ ಯಾ ಕೊರೆಯಚ್ಚುಗಳಿಂದ ತೆಗೆದ ಒಂದು ಪ್ರತಿ.
  4. ಮುದ್ರಣ; ಆವೃತ್ತಿ:
    1. ಒಂದು ಸಲ ಮುದ್ರಿಸಿದ ಒಟ್ಟು ಪ್ರತಿಗಳ ಸಂಖ್ಯೆ.
    2. (ಪುಸ್ತಕ ಮೊದಲಾದವುಗಳ) ಪ್ರತಿಗಳನ್ನು ಒಂದು ಬಾರಿ ಮುದ್ರಿಸುವುದು.
  5. (ಮೊದಲು ಮುದ್ರಿಸಿದ್ದನ್ನೇ ಬದಲಾವಣೆಯಿಲ್ಲದೆ ಮಾಡಿದ) ಪುನರ್ಮುದ್ರಣ; ಪುನರಾವೃತ್ತಿ.
  6. (ಮುಖ್ಯವಾಗಿ ಮನಸ್ಸಿನ ಮೇಲೆ ಆದ) ಪರಿಣಾಮ; ಪ್ರಭಾವ.
  7. (ಮನರಂಜನೆಗಾಗಿ ಮಾಡುವ ವ್ಯಕ್ತಿ, ಪ್ರಾಣಿ ಯಾ ಪಕ್ಷಿಗಳ) ಕಲಾತ್ಮಕ ಅನುಕರಣ.
  8. ಎಣಿಕೆ; ಅನಿಸಿಕೆ; ಮನಸ್ಸಿನ ಮೇಲೆ ಉಂಟಾದ ಅಸ್ಪಷ್ಟವೋ ತಪ್ಪೋ ಆಗಿರುವ ಭಾವನೆ, ಅಭಿಪ್ರಾಯ: that is my impression ಅದು ನನ್ನ ಭಾವನೆ. I was under the impression that ಅದು ನನ್ನ ಎಣಿಕೆಯಾಗಿತ್ತು.