See also 2impress  3impress
1impress ಇಂಪ್ರೆಸ್‍
ನಾಮವಾಚಕ
  1. ಮುದ್ರೆ ಒತ್ತುವುದು; ಛಾಪು, ಠಸ್ಸೆ – ಹಾಕುವುದು.
  2. ಮುದ್ರೆ; ಠಸ್ಸೆ; ಛಾಪು; ಮೊಹರು; ಮುದ್ರೆ ಮೊದಲಾದವುಗಳ ಗುರುತು.
  3. (ರೂಪಕವಾಗಿ) ವೈಲಕ್ಷಣ್ಯ; ಯಾವುದೋ ಒಂದರ ವಿಶಿಷ್ಟ ಲಕ್ಷಣ, ಚಿಹ್ನೆ, ಗುರುತು, ಮುದ್ರೆ: the impress of a strong personality ದೃಢ ವ್ಯಕ್ತಿತ್ವದ ಮುದ್ರೆ.
See also 1impress  3impress
2impress ಇಂಪ್ರೆಸ್‍
ಸಕರ್ಮಕ ಕ್ರಿಯಾಪದ
  1. (ಗುರುತು, ಠಸ್ಸೆ, ಮುದ್ರೆ, ಮೊಹರು, ಮೊದಲಾದವನ್ನು) ಒತ್ತು; ಹಾಕು: the footmark impressed on the grass ಹುಲ್ಲಿನ ಮೇಲೆ ಒತ್ತಿದ ಹೆಜ್ಜೆಗುರುತು.
  2. (ಒಬ್ಬನ ಮೇಲೆ ಯಾ ಅವನ ಮನಸ್ಸಿನ ಮೇಲೆ ಭಾವನೆ ಮೊದಲಾದವನ್ನು) ಅಚ್ಚೊತ್ತು; ಮೂಡಿಸು; ಮನಗಾಣಿಸು; ಮನದಟ್ಟು ಮಾಡು; ಮನಸ್ಸಿಗೆ ನಾಟಿಸು: beliefs impressed on us in our childhood ನಮ್ಮ ಬಾಲ್ಯದಲ್ಲಿ ನಮ್ಮ ಮೇಲೆ ಅಚ್ಚೊತ್ತಿದ ನಂಬಿಕೆಗಳು.
  3. (ಒಂದು ವಸ್ತುವಿನ ಮೇಲೆ) ಮುದ್ರೆ ಒತ್ತು; ಠಸ್ಸೆ ಹಾಕು; ಮೊಹರು ಹಾಕು (ರೂಪಕವಾಗಿ ಸಹ): impressed the wax with his seal ಅರಗಿನ ಮೇಲೆ ತನ್ನ ಮೊಹರನ್ನು ಒತ್ತಿದ.
  4. ಗಾಢವಾದ – ಪರಿಣಾಮವನ್ನುಂಟು ಮಾಡು, ಪ್ರಭಾವ ಬೀರು: the letter does not impress me favourably ಆ ಕಾಗದ ನನ್ನ ಮೇಲೆ ಒಳ್ಳೆಯ ಪರಿಣಾಮ ಉಂಟುಮಾಡುತ್ತಿಲ್ಲ.
  5. (ವ್ಯಕ್ತಿತ್ವ, ಭಾವನೆ, ಮೊದಲಾದವುಗಳ ಮೂಲಕ ಇತರರ ಮೇಲೆ ಒಳ್ಳೆಯ ಯಾ ಕೆಟ್ಟ) ಪ್ರಭಾವ ಬೀರು; ಪರಿಣಾಮ ಉಂಟುಮಾಡು: he tried to impress me with his importance ಅವನು ತನ್ನ ಪ್ರತಿಷ್ಠೆ ತೋರಿಸಿಕೊಳ್ಳುವುದರ ಮೂಲಕ ನನ್ನ ಮೇಲೆ ಪರಿಣಾಮ ಬೀರಲು ಪ್ರಯತ್ನಿಸಿದ.
  6. (ವಿದ್ಯುದ್ವಿಜ್ಞಾನ) (ವೋಲ್ಟೇಜ್‍ ಮೊದಲಾದವನ್ನು) ಹೊರಗಿನಿಂದ ಹಾಕು, ಕೊಡು; ಬಾಹ್ಯವಾಗಿ ಒದಗಿಸು.
See also 1impress  2impress
3impress ಇಂಪ್ರೆಸ್‍
ಸಕರ್ಮಕ ಕ್ರಿಯಾಪದ
  1. (ಚರಿತ್ರೆ) (ಜನರನ್ನು ಸೈನ್ಯಕ್ಕೆ ಸೇರುವಂತೆ) ಒತ್ತಾಯ ಮಾಡು; ಬಲಾತ್ಕರಿಸು; ಯುದ್ಧಕ್ಕಾಗಿ ಜನರನ್ನು ಹಿಡಿ.
  2. (ಚರಿತ್ರೆ) ಸ್ವಾಧೀನಪಡಿಸಿಕೊ; ಸರಕು ಮೊದಲಾದವನ್ನು ಸಾರ್ವಜನಿಕ ಉಪಯೋಗಕ್ಕಾಗಿ ವಶಪಡಿಸಿಕೊ.
  3. (ಪ್ರಾಚೀನ ಪ್ರಯೋಗ) (ವಾದ ಮೊದಲಾದವುಗಳಲ್ಲಿ ಒಂದು ವಿಷಯವನ್ನು) ಬಳಸಿಕೊ; ಉಪಯೋಗಿಸಿಕೊ: philology was impressed into the service of the doctrine ಸಿದ್ಧಾಂತಕ್ಕೆ ಆಧಾರವಾಗಿ ಭಾಷಾಶಾಸ್ತ್ರವನ್ನು ಬಳಸಿಕೊಳ್ಳಲಾಯಿತು.