impracticable ಇಂಪ್ರಾಕ್ಟಿಕಬ್‍ಲ್‍
ಗುಣವಾಚಕ
  1. ಕಾರ್ಯಸಾಧ್ಯವಲ್ಲದ; ಅವ್ಯವಹಾರ್ಯವಾದ; ಕಾರ್ಯರೂಪಕ್ಕೆ ತರಲಾಗದ; ಆಚರಣೆಗೆ ತರಲಾಗದ: economically impracticable ಆರ್ಥಿಕವಾಗಿ ಕಾರ್ಯಸಾಧ್ಯವಲ್ಲದ.
  2. (ಮನುಷ್ಯ, ವಸ್ತು, ಮೊದಲಾದವುಗಳ ವಿಷಯದಲ್ಲಿ) ಹತೋಟಿಗೆ ಸಿಗದ; ನಿರ್ವಹಿಸಲಾಗದ; ಅನಿರ್ವಾಹ್ಯ; ಏಗಲಾಗದ; ಏಗುವುದಕ್ಕಾಗದ.
  3. (ರಸ್ತೆ ಮೊದಲಾದವುಗಳ ವಿಷಯದಲ್ಲಿ) ಹಾಯಲಾಗದ; ದುರ್ಗಮ(ವಾದ); ಹತ್ತಲಾರದ; ಏರಲಾರದ: an impracticable road ದುರ್ಗಮ ಮಾರ್ಗ. an impracticable cliff ಏರಲಾರದ ಕಡಿಬಂಡೆ.