impoverish ಇಂಪಾವರಿಷ್‍
ಸಕರ್ಮಕ ಕ್ರಿಯಾಪದ
  1. ಬಡತನಕ್ಕಿಳಿಸು; ದರಿದ್ರೀಕರಿಸು; ಬಡವನನ್ನಾಗಿ ಮಾಡು: a country impoverished by war ಯುದ್ಧದಿಂದ ಬಡವಾದ ದೇಶ.
  2. ಶಕ್ತಿಯುಡುಗಿಸು; ದುರ್ಬಲಗೊಳಿಸು.
  3. ನಿಸ್ಸಾರಗೊಳಿಸು; ನಿಷ್ಫಲಗೊಳಿಸು; ಫಲವತ್ತಿಲ್ಲದಂತೆ ಮಾಡು; ಸಾರ, ರುಚಿ, ಗುಣ, ಮೊದಲಾದವನ್ನು – ಕುಂದಿಸು, ಕಡಿಮೆಮಾಡು: impoverishes the soil ಭೂಮಿಯನ್ನು ನಿಸ್ಸಾರಗೊಳಿಸುತ್ತದೆ. impoverished cheese ನಿಸ್ಸಾರವಾದ ಚೀಸು.