imposition ಇಂಪಸಿಷನ್‍
ನಾಮವಾಚಕ
  1. (ಸುಂಕ, ಕೆಲಸ, ಮೊದಲಾದವುಗಳ ವಿಷಯದಲ್ಲಿ) ಹೇರುವಿಕೆ; ಹೊರಿಸುವಿಕೆ; ವಿಧಿಸುವಿಕೆ.
  2. ಹೇರಲ್ಪಡುವಿಕೆ; ಹೊರಿಸಲ್ಪಡುವಿಕೆ.
  3. (ಕ್ರೈಸ್ತದೀಕ್ಷಾವಿಧಿಯಲ್ಲಿ) ಕರನ್ಯಾಸ; ಹಸ್ತಾರೋಪಣ; ಪಾದ್ರಿಯು ತಲೆಯ ಮೇಲೆ ಕೈ ಇಡುವುದು.
  4. (ವಿಧಿಸಿದ) ತೆರಿಗೆ; ಸುಂಕ; ಕರ.
  5. ವಂಚನೆ; ಠಕ್ಕು; ಮೋಸ; ದಗಾ.
  6. ಶಾಲೆ ಶಿಕ್ಷೆ; ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷೆಯಾಗಿ ನಿಯಮಿಸಿದ ಕೆಲಸ.
  7. (ಮುದ್ರಣ) ಪುಟಜೋಡಣೆ; (ಅಚ್ಚುಮೊಳೆ ಪುಟಗಳನ್ನು) ಕ್ರಮವಾಗಿ ಜೋಡಿಸಿ, ಚೌಕಟ್ಟಿನಲ್ಲಿ ಬಿಗಿಸುವುದು.