impose ಇಂಪೋಸ್‍
ಸಕರ್ಮಕ ಕ್ರಿಯಾಪದ
  1. (ತೆರಿಗೆ, ಕರ್ತವ್ಯ, ಆಪಾದನೆ, ಉಪಕಾರದ ಭಾರ, ಹಂಗು, ಮೊದಲಾದವನ್ನು) ಹೇರು; ಹೊರಿಸು; ಹಾಕು; ವಿಧಿಸು.
  2. (ಯಾವುದಾದರೂ ವಸ್ತು ಮೊದಲಾದವನ್ನು) ಮೋಸದಿಂದ – (ಒಬ್ಬನ) ತಲೆಗೆ ಕಟ್ಟು; ತಲೆಯ ಮೇಲೆ ಹೊರಿಸು.
  3. (ಬೇಡದ ವಸ್ತುವನ್ನು, ತನ್ನನ್ನೇ ಯಾ ತನ್ನ ಸಹವಾಸವನ್ನು) ಹೇರು; ಬಲವಂತವಾಗಿ ಹೊರಿಸು.
  4. (ಮುದ್ರಣ) ಮೇಲ್ಬಿಗಿ; ಜೋಡಿಸಿ ಬಿಗಿ; ಭದ್ರಪಡಿಸು; ಅಚ್ಚು ಮೊಳೆ ಪುಟಗಳನ್ನು ಮುದ್ರಣ ಚೌಕಟ್ಟಿನಲ್ಲಿ ಕ್ರಮವಾಗಿ ಜೋಡಿಸಿ ಬಿಗಿಪಡಿಸು.
  5. (ಪ್ರಾಚೀನ ಪ್ರಯೋಗ) (ವಸ್ತುವನ್ನು) ಒಂದರ ಮೇಲಿಡು.
ಅಕರ್ಮಕ ಕ್ರಿಯಾಪದ
  1. (ಪ್ರಭಾವಶಾಲಿಯಾದ ನಡತೆ ಯಾ ಆಕಾರದಿಂದ) ಪ್ರಭಾವ, ಪರಿಣಾಮ – ಬೀರು.
  2. ಮೋಸಮಾಡು; ಟೋಪಿಹಾಕು; ವಂಚಿಸು.
ಪದಗುಚ್ಛ

impose on (or upon)

  1. ಮೋಸಮಾಡು; ವಂಚಿಸು.
  2. (ಮಾಡಲು ಮನಸ್ಸಿರುವ ಯಾ ಸೌಜನ್ಯವುಳ್ಳ ಯಾ ಸರಾಗವಾಗಿ ನಂಬಿಬಿಡುವ ವ್ಯಕ್ತಿಯ) ದೌರ್ಬಲ್ಯವನ್ನು ದುರುಪಯೋಗ ಪಡಿಸಿಕೊ; (ಸ್ನೇಹ, ವಿಶ್ವಾಸ, ಮೊದಲಾದವನ್ನು) ಸ್ವಪ್ರಯೋಜನಕ್ಕಾಗಿ ಉಪಯೋಗಿಸಿಕೊ.