important ಇಂಪಾರ್ಟಂಟ್‍
ಗುಣವಾಚಕ
  1. (ಒಬ್ಬ ವ್ಯಕ್ತಿ, ಒಂದು ಉದ್ದೇಶ, ಮೊದಲಾದವಕ್ಕೆ) ಮುಖ್ಯ(ವಾದ); ಪ್ರಮುಖ(ವಾದ); ಪ್ರಧಾನ(ವಾದ).
  2. ತೂಕವುಳ್ಳ; ಗುರುತರವಾದ; ಮಹತ್ವದ.
  3. ಪರಿಣಾಮಕಾರಿ; ಪ್ರಭಾವಶಾಲಿ: important decisions ಪರಿಣಾಮಕಾರಿಯಾದ ತೀರ್ಮಾನಗಳು; ಪ್ರಭಾವಶಾಲಿ ನಿರ್ಣಯಗಳು.
  4. ಆಡಂಬರದ; ಪ್ರತಿಷ್ಠೆಯ; ಡೌಲಿನ; ಡಬಡ್ಡಾಳಿಕೆಯ: with an important air ಡಬಡ್ಡಾಳಿಕೆಯಿಂದ.
  5. (ವ್ಯಕ್ತಿಯ ವಿಷಯದಲ್ಲಿ ದರ್ಜೆ ಯಾ ವರ್ಗದಲ್ಲಿ) ಪ್ರಮುಖ; ಉನ್ನತ; ಪ್ರತಿಷ್ಠಿತ; ವರಿಷ್ಠ.