See also 2import
1import ಇಂಪೋರ್ಟ್‍
ಸಕರ್ಮಕ ಕ್ರಿಯಾಪದ
  1. (ವಸ್ತುವನ್ನು, ಮುಖ್ಯವಾಗಿ ಸರಕನ್ನು, ಹೊರದೇಶದಿಂದ) ತರು; ಆಮದು ಮಾಡು; ಆಯಾತ ಮಾಡು.
  2. ಸೂಚಿಸು; ಅರ್ಥ, ಅಭಿಪ್ರಾಯ, ಭಾವ ಕೊಡು: his words imported that some change had to be made ಏನಾದರೂ ಬದಲಾವಣೆ ಮಾಡಲೇಬೇಕೆಂದು ಅವನ ಮಾತುಗಳು ಸೂಚಿಸಿದವು.
  3. ವ್ಯಕ್ತಪಡಿಸು; ಸಾರು; ತಿಳಿಸು: an inscription importing that it was erected by the pope ಪೋಪ್‍ ಸ್ಥಾಪಿಸಿದ್ದೆಂದು ತಿಳಿಸುವ ಶಾಸನ.
  4. (ಪ್ರಾಚೀನ ಪ್ರಯೋಗ) (ಒಬ್ಬನಿಗೆ, ಯಾವುದಾದರೂ ಒಂದು ವಸ್ತುವಿಗೆ) ಮುಖ್ಯವಾಗಿರು; ಮುಖ್ಯವಾಗಿ ಸಂಬಂಧಿಸಿರು ( ಅಕರ್ಮಕ ಕ್ರಿಯಾಪದ ಸಹ): questions that import us nearly ನಮಗೆ ನಿಕಟವಾಗಿ ಸಂಬಂಧಿಸಿರುವ ಸಮಸ್ಯೆಗಳು. it imports us to know ನಾವು ಮುಖ್ಯವಾಗಿ ತಿಳಿದುಕೊಳ್ಳಬೇಕಾದುದೇನೆಂದರೆ. it imports little that we are early or late ನಾವು ಬಂದಿರುವುದು ಮುಂಚಿತವಾಗಿಯೋ ತಡವಾಗಿಯೋ ಎಂಬುದು ಮುಖ್ಯವಲ್ಲ.
See also 1import
2import ಇಂಪೋರ್ಟ್‍
ನಾಮವಾಚಕ
  1. ಸೂಚನೆ; ಅರ್ಥ; ಧ್ವನಿ; ಭಾವ; ಸೂಚಿತವಾದದ್ದು.
  2. ಪ್ರಾಧಾನ್ಯ; ಪ್ರಾಮುಖ್ಯ: a man of great import ಬಹಳ ಪ್ರಾಮುಖ್ಯವುಳ್ಳ ವ್ಯಕ್ತಿ.
  3. (ಸಾಮಾನ್ಯವಾಗಿ ಬಹುವಚನದಲ್ಲಿ) ಒಟ್ಟು – ಆಯಾತ, ಆಮದು; ಆಮದಿನ ಮೊತ್ತ; ಆಮದಾದ ಒಟ್ಟು ಸರಕು, ಸಾಮಾನುಗಳು.
  4. ಆಮದಾದ ವಸ್ತು ಯಾ ಸರಕು.
  5. = importation.