imply ಇಂಪ್ಲೈ
ಸಕರ್ಮಕ ಕ್ರಿಯಾಪದ
  1. (ಕಂಠೋಕ್ತವಾಗಿ ಹೇಳದಿದ್ದರೂ, ಯಾವುದೋ ಒಂದು ವಿಷಯದ ಸತ್ಯಾಂಶವನ್ನು) ಸೂಚಿಸು; ವ್ಯಕ್ತಗೊಳಿಸು; (ಅಡಗಿರುವ) ಅರ್ಥ ಕೊಡು: the girl’s evasive answer implied that her suitor has changed his mind ಆ ಹುಡುಗಿಯ ಜಾರಿಕೆಯ ಉತ್ತರವು ಅವಳ ನಲ್ಲ ಮನಸ್ಸನ್ನು ಬದಲಾಯಿಸಿಬಿಟ್ಟನೆಂಬುದನ್ನು ಸೂಚಿಸಿತು.
  2. (ಒಂದು ವಿಷಯವು ಅನಿವಾರ್ಯವಾಗಿ ಇನ್ನೊಂದನ್ನು) ಸೂಚಿಸು; ಒಳಗೊಂಡಿರು: speech implies a speaker ಮಾತು ಮಾತಾಡುವವನನ್ನು ಒಳಗೊಂಡಿರುತ್ತದೆ; ಮಾತು ಎಂಬುದು ‘ಮಾತನಾಡುವವನು’ (ಇದ್ದಾನೆ) ಎಂಬುದನ್ನು ಸೂಚಿಸುತ್ತದೆ.
  3. ಸೂಚಿಸು; ಪರೋಕ್ಷವಾಗಿ ವ್ಯಕ್ತಪಡಿಸು: your statement implies that I am wrong ನಿನ್ನ ಹೇಳಿಕೆಯು ನನ್ನದೇ ತಪ್ಪು ಎಂಬುದನ್ನು ಸೂಚಿಸುತ್ತದೆ.