implicit ಇಂಪ್ಲಿಸಿಟ್‍
ಗುಣವಾಚಕ
  1. ಧ್ವನಿತ; ಸೂಚ್ಯ; ವ್ಯಕ್ತವಾಗಿ ಹೇಳದಿದ್ದರೂ ಅದೇ ಅರ್ಥ ಕೊಡುವ.
  2. (ವಸ್ತುತಃ) ಅಡಕವಾಗಿರುವ; ಅಡಗಿರುವ; ಸೇರಿರುವ; ಅಂತರ್ಗತ; ಅಂತರ್ನಿಹಿತ: the oak is implicit in the acorn ಓಕ್‍ಮರ ಅದರ ಬೀಜದಲ್ಲೇ ಅಡಗಿದೆ. the drama implicit in the situation ಆ ಸನ್ನಿವೇಶದಲ್ಲಿರುವ ನಾಟಕೀಯತೆ.
  3. ನಿಸ್ಸಂದೇಹದ; ದೃಢವಾದ; ನಿಸ್ಸಂದಿಗ್ಧವಾದ; ಎಳ್ಳಷ್ಟೂ – ಸಂಶಯವೆತ್ತದ, ಸಂದೇಹ ಪಡದ: implicit faith ಸಂಪೂರ್ಣ ಶ್ರದ್ಧೆ; ಪೂರ್ಣ ವಿಶ್ವಾಸ; ದೃಢ ನಂಬಿಕೆ; ವ್ಯಕ್ತಿಯ ಸ್ವತಂತ್ರವಾದ ವಿಚಾರದಿಂದ ಒದಗಿರದೆ ಧರ್ಮಗ್ರಂಥ ಮೊದಲಾದವುಗಳ ಆಧಾರವನ್ನು ಪೂರ್ಣವಾಗಿ ಅವಲಂಬಿಸಿರುವ ನಂಬಿಕೆ. implicit obedience ಸಂಪೂರ್ಣ ವಿಧೇಯತೆ; ಪ್ರಶ್ನೆಯನ್ನೇ ಎತ್ತದ ವಿಧೇಯತೆ.
  4. (ಗಣಿತ) ಇಂಗಿತ; (ಫಲನದ ವಿಷಯದಲ್ಲಿ) ಸ್ವತಂತ್ರಚರಗಳ ಮೂಲಕ ನೇರವಾಗಿ ವ್ಯಕ್ತವಾಗಿರದ.