See also 2implicate
1implicate ಇಂಪ್ಲಿಕಟ್‍
ನಾಮವಾಚಕ

(ಪ್ರತಿಜ್ಞಾವಾಕ್ಯ ಮೊದಲಾದವುಗಳಲ್ಲಿ) ಸೂಚಿತ(ವಾದದ್ದು).

See also 1implicate
2implicate ಇಂಪ್ಲಿಕೇಟ್‍
ಸಕರ್ಮಕ ಕ್ರಿಯಾಪದ
  1. (ಪ್ರಾಚೀನ ಪ್ರಯೋಗ) ತೆಕ್ಕೆಹಾಕು; ತೊಡಕಿಸು; ತೊಡರಿಸು; ತಳಕು ಹಾಕು; ಒಂದಕ್ಕೊಂದು ಸುತ್ತು.
  2. ಅನುಮಾನಕ್ಕೆ ಒಯ್ಯು; ಅನುಮಿತಿಯ ಮೂಲಕ ಸೂಚಿಸು: ‘parent’ implicates child ‘ಜನಕ’ ಎಂಬ ಶಬ್ದವು ಮಗು ಇದೆ ಎಂಬುದನ್ನು ಸೂಚಿಸುತ್ತದೆ.
  3. ಪರಿಣಾಮವಾಗಿ ಯಾ ಫಲವಾಗಿ – (ಯಾವುದಕ್ಕೇ) ಒಯ್ಯು, ಮುಟ್ಟಿಸು: it implicates a contradiction ಅದು ಪೂರ್ವಾಪರ ವಿರೋಧಕ್ಕೆ ಒಯ್ಯುತ್ತದೆ.
  4. (ಒಬ್ಬನನ್ನು ದೋಷಾರೋಪಣೆ, ತಕ್ಸೀರು, ಮೊದಲಾದವುಗಳಲ್ಲಿ) ಸಿಕ್ಕಿಸು; ಒಳಪಡಿಸು; ಸಿಕ್ಕಿಹಾಕು.
  5. (ಕರ್ಮಣಿಪ್ರಯೋಗ) ಒಂದರ ಪರಿಣಾಮಕ್ಕೆ – ಒಳಗಾಗಿರು, ಸಿಕ್ಕಿರು.