See also 2implement
1implement ಇಂಪ್ಲಿಮಂಟ್‍
ನಾಮವಾಚಕ
  1. (ಪೀಠೋಪಕರಣ, ಉಡುಪು, ಮೊದಲಾದ) ಸಾಮಗ್ರಿ; ಸಾಮಾನು.
  2. (ಬಹುವಚನದಲ್ಲಿ) (ಪೀಠೋಪಕರಣ, ಉಡುಪು, ಮೊದಲಾದವುಗಳ) ಸಜ್ಜು.
  3. (ಮುಖ್ಯವಾಗಿ ಬಹುವಚನದಲ್ಲಿ) ಮುಟ್ಟು; ಉಪಕರಣ; ಸಲಕರಣೆ; ಆಯುಧ; ಹತ್ಯಾರು.
  4. (ಬಹುವಚನದಲ್ಲಿ) ಪಾತ್ರೆ ಪರಡಿ.
  5. (ಸ್ಕಾಟ್ಲೆಂಡ್‍ ನ್ಯಾಯಶಾಸ್ತ್ರ) (ಒಪ್ಪಂದ ಮೊದಲಾದವುಗಳ) ನಿರ್ವಹಣೆ; ನೆರವೇರಿಕೆ; ಪರಿಪಾಲನೆ.
  6. (ರೂಪಕವಾಗಿ) ಉಪಕರಣ; ಸಾಧನ: man as an implement of divine plan ದೈವಸಂಕಲ್ಪದ ಸಾಧನವಾಗಿ ಮಾನವ.
See also 1implement
2implement ಇಂಪ್ಲಿಮೆಂಟ್‍
ಸಕರ್ಮಕ ಕ್ರಿಯಾಪದ
  1. (ಒಪ್ಪಂದ, ವಾಗ್ದಾನ, ಏರ್ಪಾಡು, ಗೊತ್ತುಪಾಡು, ಮೊದಲಾದವನ್ನು) ನಡೆಸು, ನಡೆಸಿಕೊಡು; ನೆರವೇರಿಸು; ಕೈಗೂಡಿಸು, ಕಾರ್ಯಗತ ಮಾಡು; ಪರಿಪಾಲಿಸು.
  2. (ಕಾರ್ಯಗತಿ, ವಿಧಾನ, ಕ್ರಮ, ಮೊದಲಾದವನ್ನು) ಪೂರ್ಣ ಮಾಡು; ಭರತಿ ಮಾಡು; ಕೊರತೆ ತುಂಬು; ಜೊತೆಗೆ ಸೇರಿಸಿ ಪೂರ್ತಿಗೊಳಿಸು.
  3. (ಯೋಜನೆ, ತೀರ್ಮಾನ, ಮೊದಲಾದವನ್ನು) ಕಾರ್ಯರೂಪಕ್ಕೆ ತರು.
  4. (ಸಾಧನ, ಸಲಕರಣೆ, ಮೊದಲಾದವುಗಳಿಂದ) ಸಜ್ಜುಗೊಳಿಸು: implemented for industry ಕೈಗಾರಿಕೆಗಾಗಿ ಸಜ್ಜುಗೊಳಿಸಿದ.