See also 2implant
1implant ಇಂಪ್ಲಾಂಟ್‍
ಸಕರ್ಮಕ ಕ್ರಿಯಾಪದ
  1. ಒಳಸೇರಿಸು; ಅಂತರ್ನಿವೇಶಿಸು; ಒಳಕ್ಕೆ – ಸೇರಿಸು, ನೆಡು, ನಾಟು.
  2. (ತತ್ತ್ವ, ಭಾವನೆ, ಮೊದಲಾದವನ್ನು ಮನಸ್ಸು ಮೊದಲಾದವುಗಳಲ್ಲಿ) ನೆಡು; ಊರಿಸು; ಕಚ್ಚಿಸು; ಸ್ಥಾಪಿಸು; ನೆಲೆಗೊಳಿಸು.
  3. (ಸಸಿ ಮೊದಲಾದವನ್ನು) ನೆಡು; ನಾಟು.
  4. (ವೈದ್ಯಶಾಸ್ತ್ರ) (ಊತಕ ಮೊದಲಾದವನ್ನು) ದೇಹದಲ್ಲಿ ಸೇರಿಸು, ನಾಟಿಸು; ಅಂತರ್ನಿವೇಶಿಸು.
  5. (ಕರ್ಮಣಿಪ್ರಯೋಗದಲ್ಲಿ) (ಗರ್ಭಾಧಾನವಾದ ಅಂಡಾಣುವಿನ ವಿಷಯದಲ್ಲಿ) ಗರ್ಭಕೋಶದ ಗೋಡೆಗೆ ಅಂಟಿಕೊ, ಹತ್ತಿಕೊ; ಅಂತರ್ನಿವಿಷ್ಟವಾಗು.
See also 1implant
2implant ಇಂಪ್ಲಾಂಟ್‍
ನಾಮವಾಚಕ
  1. ಒಳಸೇರಿಸಿದ್ದು; ಅಂತರ್ನಿವಿಷ್ಟ; ಒಳಕ್ಕೆ ಸೇರಿಸಿದ, ನೆಟ್ಟ ವಸ್ತು.
  2. ದೇಹಾಂತರ್ನಿವಿಷ್ಟ; ದೇಹದೊಳಗೆ ಸೇರಿಸಿದ ವಸ್ತು, ಮುಖ್ಯವಾಗಿ ರೇಡಿಯಂ ಚಿಕಿತ್ಸೆಗೆ ಬೇಕಾದ ವಸ್ತುವನ್ನೊಳಗೊಂಡ ಊತಕದ ಚೂರು ಯಾ ಸಂಪುಟ (ಕ್ಯಾಪ್ಸೂಲು).