impinge ಇಂಪಿಂಜ್‍
ಸಕರ್ಮಕ ಕ್ರಿಯಾಪದ

(ಯಾವುದಾದರೂ ವಸ್ತುವನ್ನು) ತಾಕಿಸು; ಡಿಕ್ಕಿಹೊಡೆಸು; ಸಂಘಟ್ಟಿಸು.

ಅಕರ್ಮಕ ಕ್ರಿಯಾಪದ
  1. ತಟ್ಟು; ತಾಕು; ತಗುಲು; ಬಡಿ; ಆಘಾತ ಮಾಡು; ಸಂಘಟ್ಟಿಸು; ಡಿಕ್ಕಿ ಹೊಡೆ.
  2. (ಇನ್ನೊಬ್ಬನ ಭೂಮಿ, ಹಕ್ಕು, ಮೊದಲಾದವನ್ನು) ಅತಿಕ್ರಮಿಸು; ಒತ್ತರಿಸು; ಆಕ್ರಮಿಸು; ಒತ್ತುವರಿ ಮಾಡು: impinge upon another’s rights ಪರರ ಹಕ್ಕುಗಳ ಮೇಲೆ ಅತಿಕ್ರಮಿಸು.
  3. ಪ್ರಭಾವ ಬೀರು; ಪರಿಣಾಮವುಂಟುಮಾಡು; ಮುದ್ರೆಒತ್ತು: impinges upon the imagination ಕಲ್ಪನೆಯ ಮೇಲೆ ಮುದ್ರೆಯೊತ್ತುತ್ತದೆ.