impersonal ಇಂಪರ್ಸನಲ್‍
ಗುಣವಾಚಕ
  1. (ವ್ಯಾಕರಣ) (ಕ್ರಿಯಾಪದದ ವಿಷಯದಲ್ಲಿ) ಅಕರ್ತೃಕ; ಕರ್ತೃಪದವಿಲ್ಲದ.
  2. ನಿರಾಕಾರ; ನೀರೂಪ; ಮನುಷ್ಯಾಕಾರವಿಲ್ಲದ; ಪುರುಷಾಕಾರವಿಲ್ಲದ; ವ್ಯಕ್ತಿಸ್ವರೂಪವಿಲ್ಲದ: impersonal deity ನಿರಾಕಾರ ದೇವತೆ; ಪುರುಷರೂಪವಿಲ್ಲದ ದೇವತೆ. impersonal forces ನೀರೂಪ ಶಕ್ತಿಗಳು, (ಉದಾಹರಣೆಗೆ ನಿಸರ್ಗದಲ್ಲಿರುವಂಥ) ಮಾನವರೂಪವಿಲ್ಲದ ಶಕ್ತಿಗಳು.
  3. ವೈಯಕ್ತಿಕವಲ್ಲದ; ಅವೈಯಕ್ತಿಕ; ವ್ಯಕ್ತಿಗೆ ಅನ್ವಯಿಸದ, ಸಂಬಂಧಿಸದ: impersonal remarks ವೈಯಕ್ತಿಕವಲ್ಲದ ಟೀಕೆಗಳು.