imperialism ಇಂಪಿಅರಿಅಲಿಸಮ್‍
ನಾಮವಾಚಕ
  1. (ಮುಖ್ಯವಾಗಿ ನಿರಂಕುಶವಾದ) ಸಾರ್ವಭೌಮತ್ವ; ಚಕ್ರವರ್ತಿ ಪ್ರಭುತ್ವ; ಸಾಮ್ರಾಜ್ಯಶಾಹಿ.
  2. (ಬ್ರಿಟಿಷ್‍ ಪ್ರಯೋಗ) (ಚರಿತ್ರೆ) ಸಾಮ್ರಾಜ್ಯಶಾಹಿ ವಿಸ್ತರಣ; ಎಲ್ಲಿ ವ್ಯಾಪಾರಕ್ಕೆ ಬ್ರಿಟಿಷರ (ಧ್ವಜ) ರಕ್ಷಣೆ ಬೇಕಾಗಿದೆಯೊ ಅಲ್ಲಿಗೆ ಚಕ್ರವರ್ತಿಯ ಆಜ್ಞಾನುಸಾರ ಬ್ರಿಟಿಷ್‍ ಸಾಮ್ರಾಜ್ಯ ವಿಸ್ತರಿಸುವಿಕೆ.
  3. (ಬ್ರಿಟಿಷ್‍ ಪ್ರಯೋಗ) (ಚರಿತ್ರೆ) ಸಾಮ್ರಾಜ್ಯ ಸಂಘಟನೆ; ಯುದ್ಧದಂಥ ರಕ್ಷಣಾ ಕಾರ್ಯಗಳು, ಸಾಮ್ರಾಜ್ಯದ ಆಂತರಿಕ ವಾಣಿಜ್ಯ, ಮೊದಲಾದವಕ್ಕಾಗಿ ಬ್ರಿಟಿಷ್‍ ಸಾಮ್ರಾಜ್ಯದ ವಿವಿಧ ವಸಾಹತುಗಳ ಸಂಘಟನೆ.
  4. (ಸಾಮಾನ್ಯವಾಗಿ ಹೀನಾರ್ಥಕ ಪ್ರಯೋಗ) ಸಾಮ್ರಾಜ್ಯತತ್ತ್ವ; ಸಾಮ್ರಾಜ್ಯಶಾಹಿ; ವಸಾಹತುಗಳನ್ನು ಮತ್ತು ಆಶ್ರಿತ ರಾಜ್ಯಗಳನ್ನು ಗಳಿಸಬೇಕೆಂಬ ತತ್ತ್ವ.
  5. (ಸಾಮಾನ್ಯವಾಗಿ ಹೀನಾರ್ಥಕ ಪ್ರಯೋಗ) ವಸಾಹತು ಗಳಿಕೆ, ಸಂಪಾದನೆ; ವಸಾಹತು ಮತ್ತು ಆಶ್ರಿತ ರಾಜ್ಯಗಳನ್ನು ಸಂಪಾದಿಸುವುದು.
  6. ಪ್ರಭಾವ ವಿಸ್ತರಣೆ; ವ್ಯಾಪಾರ, ರಾಯಭಾರ, ಮೊದಲಾದವುಗಳ ಮೂಲಕ ಒಂದು ದೇಶ ತನ್ನ ಪ್ರಭಾವವನ್ನು ಇತರರ ಮೇಲೆ ಬೀರುವುದು.