See also 2imperial
1imperial ಇಂಪಿಅರಿಅಲ್‍
ಗುಣವಾಚಕ
  1. ಸಾಮ್ರಾಜ್ಯದ; ಸಾಮ್ರಾಜ್ಯಶಾಹಿ; ಚಕ್ರಾಧಿಪತ್ಯದ; ಸಾರ್ವಭೌಮ; ಸಾಮ್ರಾಜ್ಯದಂತಸ್ತಿನ ಸ್ವತಂತ್ರ ರಾಷ್ಟ್ರದ.
  2. (ಚರಿತ್ರೆ) ಬ್ರಿಟಿಷ್‍ ಸಾಮ್ರಾಜ್ಯದ.
  3. ಚಕ್ರವರ್ತಿಯ; ಸಾರ್ವಭೌಮನ; ಸಮ್ರಾಟನ.
  4. ಪರಮಾಧಿಕಾರವುಳ್ಳ.
  5. ಪ್ರತಿಷ್ಠೆಯುಳ್ಳ; ಠೀವಿಯುಳ್ಳ; ಘನತೆಯುಳ್ಳ.
  6. ಅತ್ಯಂತ ವೈಭವದ.
  7. (ಅಳತೆ ತೂಕಗಳ ವಿಷಯದಲ್ಲಿ) ಬ್ರಿಟನ್ನಿನ; ಕಾಯಿದೆ ಮೂಲಕ ಬ್ರಿಟನ್ನಿನಲ್ಲಿ ಜಾರಿಯಲ್ಲಿರುವ: imperial gallon, acre.
  8. (ಕಾಗದದ ವಿಷಯದಲ್ಲಿ) ಇಂಪೀರಿಯಲ್‍; ಬ್ರಿಟನ್ನಿನಲ್ಲಿ $762\times 559$ ಯಾ ಅಮೆರಿಕದಲ್ಲಿ $787\times 584$ ಮಿಲಿಈಟರ್‍ ಅಳತೆಯ.
See also 1imperial
2imperial ಇಂಪಿಅರಿಅಲ್‍
ನಾಮವಾಚಕ
  1. (ಕೆಳದುಟಿಯ ಕೆಳಗಿನ) ಗಲ್ಲದ ಗಡ್ಡ; ಕೆಳದುಟಿಯ ಕೆಳಗೆ ಗಲ್ಲದ ಮೇಲೆ ಮಾತ್ರ ಚೂಪಾಗಿ ಬೆಳೆಯುವಂತೆ ಬಿಟ್ಟ ಗಡ್ಡ ಯಾ ಗಡ್ಡದ ಭಾಗ.
  2. (ಪ್ರಾಚೀನ ಪ್ರಯೋಗ) (ಕೋಚ್‍ ಬಂಡಿಯ ಚಾವಣಿಯ ಮೇಲಣ) ಸಾಮಾನುಖಾನೆ. Figure: imperial-2
  3. ಇಂಪೀರಿಯಲ್‍; ಹದಿನೈದು ಬೆಳ್ಳಿಯ ರೂಬಲ್‍ಗಳಿಗೆ ಸಮನಾದ, ರಷ್ಯಾದ ಸಾರ್‍ ಚಕ್ರವರ್ತಿಯ ಕಾಲದ ಒಂದು ಚಿನ್ನದ ನಾಣ್ಯ.
  4. (ಕಾಗದದ ವಿಷಯದಲ್ಲಿ) ಇಂಪೀರಿಯಲ್‍ ಸೈಜು; ಬ್ರಿಟನ್ನಿನಲ್ಲಿ $762\times 559$ ಯಾ ಅಮೆರಿಕದಲ್ಲಿ $787\times 584$ ಮಿಲಿಈಟರ್‍ ಅಳತೆ.