impenetrable ಇಂಪೆನಿಟ್ರಬ್‍ಲ್‍
ಗುಣವಾಚಕ
  1. ಅಪ್ರವೇಶ್ಯ; ದುಷ್ಪ್ರವೇಶ್ಯ; ಅಭೇದ್ಯ; ತೂರಲಾಗದ; ಒಳ ಹೊಗಲಾಗದ.
  2. (ರೂಪಕವಾಗಿ) ದುರ್ಭೇದ್ಯ; ದುರವಗಾಹ; ದುಜ್ಞೇಯ; ಅಜ್ಞೇಯ; ಮರ್ಮ, ಆಳ – ತಿಳಿಯಲಾಗದ.
  3. (ಭಾವ ಮೊದಲಾದವುಗಳಿಗೆ ಯಾ ಅವುಗಳಿಂದ) ಅಪ್ರವೇಶ್ಯ; ಒಳಹೊಗಲು ಎಡೆಗೊಡದ; ಪ್ರವೇಶಿಸಲು ಆಸ್ಪದವೀಯದ.
  4. (ಭೌತವಿಜ್ಞಾನ) ಅನಾಕ್ರಮ್ಯ; ನಿಷ್ಪ್ರವೇಶ್ಯ; ಎರಡು ವಸ್ತುಗಳು ಏಕಕಾಲದಲ್ಲಿ ಒಂದೇ ಸ್ಥಳವನ್ನು ಆಕ್ರಮಿಸಿಕೊಳ್ಳಲಾರದ ಗುಣ ಪಡೆದಿರುವ.