immunity ಇಮ್ಯೂನಿಟಿ
ನಾಮವಾಚಕ
  1. (ನ್ಯಾಯಶಾಸ್ತ್ರ) (ತೆರಿಗೆ, ಅಧಿಕಾರವ್ಯಾಪ್ತಿ, ಮೊದಲಾದವುಗಳಿಂದ) ವಿನಾಯಿತಿ; ಬಿಡುತಿ: immunity from taxation ತೆರಿಗೆಯಿಂದ ವಿನಾಯಿತಿ.
  2. ಬಿಡುಗಡೆ; ವಿಮುಕ್ತಿ: no one has assured immunity from error ಯಾರಿಗೂ ದೋಷದಿಂದ ಖಾತ್ರಿಯಾದ ಬಿಡುಗಡೆಯಿಲ್ಲ.
  3. (ರೋಗದ ಸೋಂಕು ಮೊದಲಾದವುಗಳಿಂದ) ರಕ್ಷಣೆ (ಪಡೆದಿರುವುದು); ಪ್ರತಿರಕ್ಷೆ; ವಿನಾಯಿತಿ: the immunity of vipers from their own poison ತಮ್ಮದೇ ವಿಷದಿಂದ ಪ್ರತಿರಕ್ಷೆಯುಳ್ಳ ವಿಷಸರ್ಪಗಳು.
  4. ಪ್ರತಿರಕ್ಷೆ; ಪ್ರತಿರಕ್ಷಕ ಗುಣ; ಸೋಂಕನ್ನು ತಡೆದು ಅದರಿಂದ ಪಾರಾಗುವ ಜೀವಿಗಳ ಗುಣ.