immobilize ಇಮೋಬಿಲೈಸ್‍
ಸಕರ್ಮಕ ಕ್ರಿಯಾಪದ
  1. ನಿಶ್ಚಲಗೊಳಿಸು; ಅಚಲಗೊಳಿಸು; ಕದಲದಂತೆ, ಚಲಿಸದಂತೆ – ಮಾಡು.
  2. (ಸೈನ್ಯಪಡೆಗಳನ್ನು, ವಾಹನಗಳನ್ನು) ಚಲಿಸಲಾಗದಂತೆ, ಕದಲದಂತೆ ಮಾಡು; ಸ್ಥಳಾಂತರಗೊಳ್ಳದಂತೆ ಮಾಡು; ಸ್ಥಗಿತಗೊಳಿಸು: the enemy was immobilized by lack of transport ವಾಹನಸೌಕರ್ಯದ ಅಭಾವದಿಂದ ಶತ್ರುಸೈನ್ಯ ಕದಲದಂತಾಯಿತು.
  3. (ಚಿಕಿತ್ಸೆಯಲ್ಲಿ ರೋಗಿಯನ್ನು ಯಾ ಅವಯವವನ್ನು) ನಿಶ್ಚಲಗೊಳಿಸು; ಕದಲದಂತೆ ಇರಿಸು: immobilizing a fractured bone ಮುರಿದ ಮೂಳೆಯನ್ನು ಕದಲದಂತೆ ಇರಿಸು.
  4. (ವ್ಯಕ್ತಿ ಮೊದಲಾದವರ) ಚಲಿಸುವ ಸ್ವಾತಂತ್ರ್ಯವನ್ನು ಮೊಟಕುಗೊಳಿಸು, ನಿಯಂತ್ರಿಸು, ಹದ್ದು ಬಸ್ತಿನಲ್ಲಿಡು.
  5. (ನಾಣ್ಯದ ವಿಷಯದಲ್ಲಿ) ಚಲಾವಣೆ ನಿಲ್ಲಿಸು; ಚಲಾವಣೆಯಿಂದ ಹಿಂದಕ್ಕೆ ತೆಗೆದುಕೊ.