immigrate ಇಮಿಗ್ರೇಟ್‍
ಸಕರ್ಮಕ ಕ್ರಿಯಾಪದ

(ವ್ಯಕ್ತಿಯನ್ನು) ನೆಲಸಲು ಕರೆತರು; ವಲಸೆ ತರು: the expense of immigrating labour ಕೆಲಸಗಾರರನ್ನು ವಲಸೆ ತರುವ ಖರ್ಚು.

ಅಕರ್ಮಕ ಕ್ರಿಯಾಪದ

(ಪರದೇಶಕ್ಕೆ) ನೆಲಸಲು ಬರು; ನೆಲೆನಿಲ್ಲಲು ಬರು; ವಲಸೆ ಬರು; ಗುಳೆ – ತೆಗೆ, ಹೋಗು; ಒಕ್ಕಲು ಬರು.