immerse ಇಮರ್ಸ್‍
ಸಕರ್ಮಕ ಕ್ರಿಯಾಪದ
  1. (ದ್ರವದಲ್ಲಿ) ಅದ್ದು; ಮುಳುಗಿಸು: immerse one’s head in the water ತಲೆಯನ್ನು ನೀರಿನಲ್ಲಿ ಮುಳುಗಿಸು.
  2. (ವ್ಯಕ್ತಿಯನ್ನು) ನೀರಿನಲ್ಲಿ ಪೂರ್ತಿ ಮುಳುಗಿಸು; ಮುಳುಗಿರುವಂತೆ ಮಾಡು.
  3. (ವ್ಯಕ್ತಿಯನ್ನು) ಪೂರ್ತಿ ನೀರಿನಲ್ಲಿ ಮುಳುಗಿಸಿ ಪವಿತ್ರ ಸ್ನಾನ ಮಡಿಸು.
  4. ಹದಿ; ಹುದುಗಿಸು; ನೆಡು; ನಾಟು: fossils immersed in sandstone ಮರಳುಗಲ್ಲಿನಲ್ಲಿ ಹುದುಗಿದ ಪಳೆಯುಳಿಕೆಗಳು.
  5. (ಸಾಲ, ತೊಂದರೆ, ಆಲೋಚನೆ, ಮೊದಲಾದವುಗಳಲ್ಲಿ) ಮುಳುಗಿಸು; ತಲ್ಲೀನವಾಗಿಸು; ಮಗ್ನಗೊಳಿಸು: immerses himself completely in his work ಅವನು ತನ್ನ ಕೆಲಸದಲ್ಲಿ ಪೂರ್ತಿಯಾಗಿ ತಲ್ಲೀನಗೊಳಿಸಿಕೊಳ್ಳುತ್ತಾನೆ.