immediate ಇಈಡಿಅಟ್‍
ಗುಣವಾಚಕ
  1. (ವ್ಯಕ್ತಿ ಯಾ ವಸ್ತುವಿಗೆ ಮತ್ತೊಂದರೊಡನೆ ಇರುವ ಸಂಬಂಧದ ವಿಷಯದಲ್ಲಿ) ನೇರ; ಪ್ರತ್ಯಕ್ಷ; ಸಾಕ್ಷಾತ್ತಾದ; ಮಧ್ಯವರ್ತಿಯಿಲ್ಲದ; ನಡುವೆ ಏನೂ ಇಲ್ಲದ; ಅವ್ಯವಹಿತ: the immediate cause of death ಸಾವಿನ ಪ್ರತ್ಯಕ್ಷ ಕಾರಣ.
  2. (ಸಂಬಂಧದ ಯಾ ಕ್ರಿಯೆಯ ವಿಷಯದಲ್ಲಿ) ನೇರವಾದ; ಸಾಕ್ಷಾತ್‍; ಮಧ್ಯವರ್ತಿಯಿಲ್ಲದ; ಸಮಕ್ಷ: they rest upon the immediate testimony of consciousness ಅವು ಚೇತನದ ನೇರವಾದ ರುಜುವಾತನ್ನು ಅವಲಂಬಿಸಿವೆ.
  3. ಅತಿ ಸಮೀಪದ; ಅತ್ಯಂತ ನಿಕಟವಾದ; ನೆರೆಯ; ಮಗ್ಗುಲಿನ; ಪಕ್ಕದ: my immediate neighbour ನನ್ನ ಮಗ್ಗುಲಿನ ನೆರೆಯವನು.
  4. ತತ್‍ಕ್ಷಣದ; ತುರ್ತಾದ; ಜರೂರಾದ; ಒಡನೆಯೇ ಸಂಭವಿಸುವ; ಕೂಡಲೇ ನಡೆಯುವ; ತಡವಿಲ್ಲದ: an immediate reply ತಡವಿಲ್ಲದ ಉತ್ತರ; ಒಡನೆಯೇ ಕೊಟ್ಟ ಜವಾಬು. our immediate concern was to get him to hospital ಅವನನ್ನು ಆಸ್ಪತ್ರೆಗೆ ಒಯ್ಯುವುದು ನಮ್ಮ ತುರ್ತು ಕೆಲಸವಾಗಿತ್ತು.
  5. (ಜ್ಞಾನದ ವಿಷಯದಲ್ಲಿ) ನೇರವಾದ; ಪ್ರತ್ಯಕ್ಷವಾದ; ಅಪರೋಕ್ಷ; ತರ್ಕದ ನೆರವಿಲ್ಲದೆ ಪಡೆದ.