immediacy ಇಈಡಿಅಸಿ
ನಾಮವಾಚಕ
  1. ಪ್ರತ್ಯಕ್ಷವಾಗಿರುವಿಕೆ; ನೇರಸಂಬಂಧ; ನೇರತನ; ನೇರವಾಗಿರುವುದು; ಸಾಕ್ಷಾತ್ತಾಗಿರುವುದು; ಮಧ್ಯವರ್ತಿಯಿಲ್ಲದ್ದು.
  2. (ತರ್ಕಶಾಸ್ತ್ರ) ಅವ್ಯವಹಿತತ್ವ; ಮಧ್ಯಮಪದದ ವ್ಯವಧಾನವಿಲ್ಲದೆ ಒಂದೇ ಪ್ರತಿಜ್ಞೆಯಿಂದ ಅನುಮಾನ ಪಡೆಯುವ ವಿಧಾನ.
  3. (ತತ್ತ್ವಶಾಸ್ತ್ರ) (ಅರಿಯಬೇಕಾದ ವಿಷಯದ ಯಾ ವಸ್ತುವಿನ) ಪ್ರತ್ಯಕ್ಷತೆ; ತರ್ಕ ಮೊದಲಾದ ಯಾವ ಮಧ್ಯವರ್ತಿಗಳೂ ಇಲ್ಲದೆ ನೇರವಾಗಿ ಮನಸ್ಸಿಗೆ ಗೋಚರವಾಗುವ ಸ್ಥಿತಿ.
  4. ಒಡನೆಯೇ ಸಂಭವಿಸುವಿಕೆ; ಕೂಡಲೇ ಆಗುವಿಕೆ.