imbroglio ಇಂಬ್ರೋಲ್ಯೋ
ನಾಮವಾಚಕ
(ಬಹುವಚನ imbroglios).
  1. ಅಸ್ತವ್ಯಸ್ತ ರಾಶಿ; ಚೆಲ್ಲಾಪಿಲ್ಲಿ ಬಿದ್ದಿರುವ ರಾಶಿ: an imbroglio of papers and books ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಕಾಗದಗಳ ಮತ್ತು ಪುಸ್ತಕಗಳ ರಾಶಿ.
  2. (ಮುಖ್ಯವಾಗಿ ರಾಜಕೀಯದಲ್ಲಿ ಯಾ ನಾಟಕದಲ್ಲಿ) ತೊಡಕು (ಸಂದರ್ಭ); ಅಸ್ತವ್ಯಸ್ತತೆ; ಬಿಕ್ಕಟ್ಟು; ಮುಗ್ಗಟ್ಟು; ಜಟಿಲ ಪರಿಸ್ಥಿತಿ; ಗೋಟಾಳಿ: the play is clever in its intrigue and imbroglio ನಾಟಕವು ತನ್ನ ಪಿತೂರಿ ಮತ್ತು ಜಟಿಲ ಸನ್ನಿವೇಶಗಳಿಂದ ಚಮತ್ಕಾರವಾಗಿದೆ.
  3. (ವ್ಯಕ್ತಿಗಳ ಯಾ ದೇಶಗಳ ಮಧ್ಯೆ ಉಂಟಾಗುವ ತೊಡಕಿನ ಯಾ ಕಹಿಯ) ಮನಸ್ತಾಪ; ಭಿನ್ನಾಭಿಪ್ರಾಯ: an imbroglio between foreign ministers ವಿದೇಶಾಂಗ ಮಂತ್ರಿಗಳ ನಡುವಣ ಮನಸ್ತಾಪ.