imbibe ಇಂಬೈಬ್‍
ಸಕರ್ಮಕ ಕ್ರಿಯಾಪದ
  1. ( ಅಕರ್ಮಕ ಕ್ರಿಯಾಪದ ಸಹ) (ಭಾವನೆಗಳು ಮೊದಲಾದವನ್ನು) ಗ್ರಹಿಸು; ಜೀರ್ಣಿಸಿಕೊ; ಮೈಗೂಡಿಸಿಕೊ; ರಕ್ತಗತ ಮಾಡಿಕೊ; ಆತ್ಮಸಾತ್‍ ಮಾಡಿಕೊ: imbibe moral principles ನೈತಿಕ ತತ್ತ್ವಗಳನ್ನು ಮೈಗೂಡಿಸಿಕೊ.
  2. (ದ್ರವವನ್ನು, ಮುಖ್ಯವಾಗಿ ಆಲ್ಕಹಾಲ್‍ ಪಾನೀಯವನ್ನು) ಕುಡಿ: he imbibed great quantities of tea ಅವನು ವಿಪರೀತ ಚಹಾ ಕುಡಿದನು.
  3. (ಗಾಳಿ ಮೊದಲಾದವನ್ನು) ಎಳೆದುಕೊ; ಸೇದಿಕೊ.
  4. (ತೇವ ಮೊದಲಾದವನ್ನು) ಹೀರು; ಹೀರಿಕೊ plants imbibe moisture from the soil ಸಸ್ಯಗಳು ನೆಲದಿಂದ ತೇವವನ್ನು ಹೀರಿಕೊಳ್ಳುತ್ತವೆ.