imago ಇಮೇಗೋ
ನಾಮವಾಚಕ
(ಬಹುವಚನ imagines ಉಚ್ಚಾರಣೆ ಇಮ್ಯಾಜಿನೀಸ್‍ ಯಾ imagos).
  1. (ಎಲ್ಲ ಅವಸ್ಥೆಗಳನ್ನೂ ದಾಟಿ, ಅಂತ್ಯಾವಸ್ಥೆಯನ್ನು ತಲುಪಿದ) ಪರಿಪೂರ್ಣ ಕೀಟ.
  2. (ಮನಶ್ಶಾಸ್ತ್ರ) ಸ್ವಕಲ್ಪಿತ ಆದರ್ಶ ರೂಪ; ಆದರ್ಶ ವ್ಯಕ್ತಿಕಲ್ಪನೆ; ಬಾಲ್ಯದಲ್ಲಿ ರೂಪಿಸಿಕೊಂಡು ವಯಸ್ಸಾದ ಮೇಲೂ ತಿದ್ದದೆ ಹಾಗೆಯೇ ಉಳಿಸಿಕೊಂಡು ಬಂದ, ತನ್ನದೇ ಯಾ ತನಗೆ ಪ್ರಿಯನಾದ ವ್ಯಕ್ತಿ (ಮುಖ್ಯವಾಗಿ ತಂದೆ ತಾಯಿ)ಯ ಯಾವುದೇ ಆದರ್ಶೀಕೃತ ಕಲ್ಪನೆ, ಭಾವನೆ: father imago ತಂದೆಯ ಆದರ್ಶ ಕಲ್ಪನೆ, ರೂಪ.