imagine ಇಮ್ಯಾಜಿನ್‍
ಸಕರ್ಮಕ ಕ್ರಿಯಾಪದ
  1. ಕಲ್ಪಿಸಿಕೊ; (ಅಸ್ತಿತ್ವದಲ್ಲಿ ಇಲ್ಲದ ಯಾ ಇಂದ್ರಿಯಗಳಿಗೆ ಗೋಚರವಾಗಿರದುದರ) ಮಾನಸಿಕ ಚಿತ್ರವನ್ನು ಯಾ ಭಾವನೆಯನ್ನು ರೂಪಿಸಿಕೊ ಯಾ ಚಿತ್ರಿಸಿಕೊ.
  2. (ವಸ್ತುವಿನ ಯಾ ವ್ಯಕ್ತಿಯ ವಿಷಯದಲ್ಲಿ ಅದು ಎಂತಿದೆ, ಏನು, ಹೇಗಿದೆ ಮೊದಲಾದವನ್ನು) ಭಾವಿಸಿಕೊ; ಕಲ್ಪಿಸಿಕೊ.
  3. ಊಹಿಸು: cannot imagine what he is doing ಅವನೇನು ಮಾಡುತ್ತಿದ್ದಾನೆಂದು ನಾನು ಊಹಿಸಲಾರೆ.
  4. (ಆಡುಮಾತು) ಎಣಿಸು; ಭಾವಿಸು; ಅಭಿಪ್ರಾಯಪಡು: I imagine it will rain ಮಳೆ ಬರಬಹುದೆಂದು ನಾನು ಭಾವಿಸುತ್ತೇನೆ.
  5. (ಭಾವನೆಯನ್ನು) ಭಾವಿಸಿಕೊ; ತಲೆಗೆ ತಂದುಕೊ; ಮನಸ್ಸಿನಲ್ಲಿ – ಮಾಡಿಕೊ; ಅಂದುಕೊ: more ugly that he imagined ಅವನು ಅಂದುಕೊಂಡಿದ್ದಕ್ಕಿಂತ ಹೆಚ್ಚು ಕುರೂಪಿಯಾಗಿ.
  6. (ವಿಧ್ಯರ್ಥದಲ್ಲಿ, ಆಶ್ಚರ್ಯಸೂಚಕ ಉದ್ಗಾರವಾಗಿ) imagine (that)! ಊಹಿಸಿಕೊ!