imagery ಇಮಿಜಿರಿ
ನಾಮವಾಚಕ
  1. (ಜಾತ್ಯೇಕವಚನದಲ್ಲಿ) ಪ್ರತಿಮೆಗಳು; ವಿಗ್ರಹಗಳು; ಮೂರ್ತಿಗಳು: a statue which the enemies of imagery have thrown down ವಿಗ್ರಹಶತ್ರುಗಳು ಕೆಳಗೆ ಕೆಡವಿರುವ ಒಂದು ಪ್ರತಿಮೆ.
  2. ಪ್ರತಿಮಾಶಿಲ್ಪ; ಮೂರ್ತಿಶಿಲ್ಪ; ವಿಗ್ರಹಕೆತ್ತನೆ: godlike works in imagery ಪ್ರತಿಮಾಶಿಲ್ಪದ ದಿವ್ಯ ಕೃತಿಗಳು.
  3. (ಜಾತ್ಯೇಕವಚನದಲ್ಲಿ) (ಮಾನಸಿಕ) ಪ್ರತಿಮೆಗಳು; ಕಲ್ಪನೆಗಳು.
  4. (ಸಾಹಿತ್ಯ ಯಾ ಕಾವ್ಯದಲ್ಲಿನ) ಪ್ರತಿಮೆ; ಅಲಂಕಾರ; ಆಲಂಕಾರಿಕ – ನಿರೂಪಣೆ, ಚಿತ್ರಣ: the whole of it is rich in thought and imagery ಅದೆಲ್ಲವೂ ವಿಚಾರ ಮತ್ತು ಅಲಂಕಾರಗಳಿಂದ ಶ್ರೀಮಂತವಾಗಿದೆ.