See also 2image
1image ಇಮಿಜ್‍
ನಾಮವಾಚಕ
  1. (ಮುಖ್ಯವಾಗಿ ಪೂಜಾವಸ್ತುವಾಗಿಟ್ಟುಕೊಂಡಿರುವ, ಸಂತರು ಮೊದಲಾದವರ) ಪ್ರತಿಮೆ; ವಿಗ್ರಹ; ಪ್ರತೀಕ; ಮೂರ್ತಿ.
  2. ಬಿಂಬ; ಪ್ರತಿಬಿಂಬ; ಕನ್ನಡಿ ಯಾ ಮಸೂರಗಳ ನೆರವಿನಿಂದ ಮೂಡಿಸಬಹುದಾದ (ವಸ್ತುವಿನ) ಪ್ರತಿರೂಪ.
  3. ರೂಪ; ಆಕೃತಿ; ಆಕಾರ: God created man in his own image ದೇವರು ತನ್ನ ಆಕಾರದಲ್ಲಿಯೇ ಮಾನವನನ್ನು ಸೃಷ್ಟಿಸಿದನು.
  4. ಪ್ರತಿಬಿಂಬ; ಪ್ರತಿರೂಪ; ಪ್ರತಿಕೃತಿ; ಪಡಿಯಚ್ಚು; ಪಡಿರೂಪ; ತದ್ರೂಪ: he is the very image of his father ಅವನು ತನ್ನ ತಂದೆಯ ಪಡಿಯಚ್ಚು, ತದ್ರೂಪ.
  5. ಮಾದರಿ; ನಮೂನೆ; ಮೂರ್ತಿ; ಮೂರ್ತ ಸ್ವರೂಪ; ಸಾಕಾರ ರೂಪ; ನಿದರ್ಶನ: he was the image of frustration ಅವನು ವಿಫಲತೆಯ ಸಾಕಾರ ರೂಪವಾಗಿದ್ದನು.
  6. ಸಾದೃಶ್ಯ; ಉಪಮೆ; ಉಪಮಾನ; ರೂಪಕ: to speak of death as a sleep, is an image common to all languages ಮರಣವನ್ನು ಒಂದು ನಿದ್ರೆಯೆನ್ನುವುದು ಎಲ್ಲಾ ಭಾಷೆಗಳಿಗೂ ಸಮಾನವಾಗಿರುವ ರೂಪಕ.
  7. ಮಾನಸಿಕ ಚಿತ್ರ, ಕಲ್ಪನೆ.
  8. ಭಾವನೆ; ಕಲ್ಪನೆ; ಮನಸ್ಸಿನಲ್ಲಿ ಮೂಡಿದ ಅಭಿಪ್ರಾಯ: the current of images that daily sweep through consciousness ಅರಿವಿನ ಮೂಲಕ ದಿನಂಪ್ರತಿ ಹಾದುಹೋಗುವ ಭಾವನೆಗಳ ಪ್ರವಾಹ.
  9. ಚಿತ್ರ; ಭಾವನೆ; ಕಲ್ಪನೆ; ಒಬ್ಬನ ಯಾ ಒಂದರ ವಿಷಯವಾಗಿ ವ್ಯಕ್ತಿ, ಸಂಸ್ಥೆ ಯಾ ಜನತೆಯ ಮನಸ್ಸಿನಲ್ಲಿ ಮೂಡಿರುವ ಅಭಿಪ್ರಾಯ: public image ಸಾರ್ವಜನಿಕ ಕಲ್ಪನೆ; ಜನಾಭಿಪ್ರಾಯ. living image ಸಜೀವ ಚಿತ್ರ; ಜೀವಂತಮೂರ್ತಿ.
  10. (ಸಾಹಿತ್ಯ, ಕಲೆ, ಮೊದಲಾದವುಗಳಲ್ಲಿ) ಪ್ರತಿಮೆ; ಪ್ರತೀಕ; ಸಂಕೇತ.
  11. (ಗಣಿತ) ಬಿಂಬ; ಬಿಂಬನದ ಪರಿಣಾಮವಾಗಿ ರೂಪುಗೊಳ್ಳುವ ಗಣ.
See also 1image
2image ಇಮಿಜ್‍
ಸಕರ್ಮಕ ಕ್ರಿಯಾಪದ
  1. ವಿಗ್ರಹಮಾಡು; ಪ್ರತಿಮೆ – ಮಾಡು, ತಯಾರಿಸು, ಕಡೆ: a hero imaged in bronze ಕಂಚಿನಲ್ಲಿ ಮಾಡಿದ ವೀರ(ನ ಪ್ರತಿಮೆ).
  2. ಚಿತ್ರಿಸು; ವರ್ಣಿಸು; ಒಂದರ ಚಿತ್ರ ಬರೆ ಯಾ ವರ್ಣನೆ ನೀಡು (ರೂಪಕವಾಗಿ ಸಹ).
  3. (ಮನಸ್ಸಿನಲ್ಲಿ) ಚಿತ್ರಿಸಿಕೊ; ಕಲ್ಪಿಸಿಕೊ: image to yourselves the scenery of rivers and lakes ನಿಮ್ಮ ಮನಸ್ಸಿನಲ್ಲೇ ನದಿ, ಸರೋವರಗಳ ದೃಶ್ಯವನ್ನು ಚಿತ್ರಿಸಿಕೊಳ್ಳಿ.
  4. ಕಣ್ಣಿಗೆ ಕಟ್ಟುವಂತೆ – ವರ್ಣಿಸು, ಬಣ್ಣಿಸು; ಸುಸ್ಪಷ್ಟವಾಗಿ, ವಿಶದವಾಗಿ – ವಿವರಿಸು: Satan’s approach is finely imaged ಸೈತಾನನ ಆಗಮನವನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿದೆ.
  5. ಸಂಕೇತಿಸು; ಸಂಕೇತರೂಪವಾಗಿ ಯಾ ಪ್ರತೀಕವಾಗಿ ನಿರೂಪಿಸು; ಮಾದರಿಯಾಗಿ ತೋರು: the heathen deities imaged human virtues ‘ಅಕ್ರೈಸ್ತ’ ದೇವತೆಗಳು ಮಾನವನ ಸದ್ಗುಣಗಳನ್ನು ಸಂಕೇತಿಸಿದವು.
  6. ಪ್ರತಿಈಕರಿಸು; ಪ್ರತಿಮಾ ವಿಧಾನದಲ್ಲಿ ನಿರೂಪಿಸು.