illustrate ಇಲಸ್ಟ್ರೇಟ್‍
ಸಕರ್ಮಕ ಕ್ರಿಯಾಪದ
  1. ಸ್ಪಷ್ಟಪಡಿಸು; ವಿವರಿಸು; ವಿಶದಗೊಳಿಸು: illustrated the new theory by references to what was already known ಆಗಲೇ ಗೊತ್ತಿದ್ದ ವಿಷಯದ ಉಲ್ಲೇಖಗಳ ಮೂಲಕ ಹೊಸ ಸಿದ್ಧಾಂತವನ್ನು ವಿವರಿಸಿದನು.
  2. ಉದಾಹರಣೆ ಕೊಡು; ದೃಷ್ಟಾಂತ ಕೊಡು; ನಿದರ್ಶಿಸು; ಉದಾಹರಣೆಗಳಿಂದ ಸ್ಪಷ್ಟಪಡಿಸು: gave many examples to illustrate his lecture ತನ್ನ ಉಪನ್ಯಾಸವನ್ನು ಸ್ಪಷ್ಟ ಪಡಿಸಲು ಅನೇಕ ಉದಾಹರಣೆಗಳನ್ನು ನೀಡಿದನು.
  3. (ವರ್ಣನೆ ಮೊದಲಾದವನ್ನು) ಸಚಿತ್ರವಾಗಿ ವಿವರಿಸು; (ರೇಖಾ) ಚಿತ್ರಗಳಿಂದ ವಿಶದೀಕರಿಸು: an illustrated textbook ಸಚಿತ್ರ ಪಠ್ಯಪುಸ್ತಕ.
  4. (ಪುಸ್ತಕ, ವರ್ತಮಾನಪತ್ರಿಕೆ, ಮೊದಲಾದವನ್ನು) ಚಿತ್ರೀಕರಿಸು; ಚಿತ್ರಗಳಿಂದ ಅಲಂಕರಿಸು, ಅಂದಗೊಳಿಸು.
ಅಕರ್ಮಕ ಕ್ರಿಯಾಪದ
  1. ಉದಾಹರಿಸು: ಉದಾಹರಣೆಯಾಗು; ನಿದರ್ಶನವಾಗು; ದೃಷ್ಟಾಂತವಾಗು: this incident illustrates the temper of the age ಈ ಘಟನೆಯು ಆ ಯುಗದ ಮನೋಭಾವವನ್ನು ಉದಾಹರಿಸುತ್ತದೆ.
  2. ಉದಾಹರಣೆಗಳಿಂದ ಸ್ಪಷ್ಟಪಡಿಸು, ವಿವರಿಸು: to prevent misunderstanding, let me illustrate ತಪ್ಪು ಗ್ರಹಿಕೆಯನ್ನು ತಪ್ಪಿಸಲು – ಉದಾಹರಣೆ ಕೊಡುತ್ತೇನೆ, ಉದಾಹರಣೆಗಳಿಂದ ವಿವರಿಸುತ್ತೇನೆ.