illusion ಇಲ್ಯೂ(ಲೂ)ಷನ್‍
ನಾಮವಾಚಕ
  1. ಮಾಯೆ; ಭ್ರಮೆ; ಭ್ರಾಂತಿ: the happy illusions of youth ಯೌವನದ ಸುಖಕರ ಭ್ರಾಂತಿಗಳು.
  2. ಆಭಾಸ; ಮಿಥ್ಯಾಜ್ಞಾನ; ಭ್ರಾಂತಿ; ವಸ್ತುವೊಂದರ ರೂಪದ ಬಗ್ಗೆ ತಪ್ಪು ಅಭಿಪ್ರಾಯ ಉಂಟುಮಾಡುವ ಇಂದ್ರಿಯಜನ್ಯ ಜ್ಞಾನ: optical illusion ದೃಷ್ಟಿಭ್ರಾಂತಿ.
  3. (ಪರಿಸ್ಥಿತಿಗಳ ಬಗ್ಗೆ) ಮಿಥ್ಯಾಕಲ್ಪನೆ; ತಪ್ಪು ಗ್ರಹಿಕೆ.
  4. (ಬುರುಕಿ, ಉಡುಪು, ಮೊದಲಾದವಕ್ಕೆ ಉಪಯೋಗಿಸುವ) ನವಿರು – ರೇಷ್ಮೆ ಬಲೆ, ರೇಷ್ಮೆ ಜಾಲರಿ ಬಟ್ಟೆ.