illumination ಇಲ್ಯೂ(ಲೂ)ಮಿನೇಷನ್‍
ನಾಮವಾಚಕ
  1. ಬೆಳಗುವಿಕೆ; ಬೆಳಗಿಸುವಿಕೆ; ಪ್ರಕಾಶಗೊಳಿಸುವಿಕೆ.
  2. (ಆಧ್ಯಾತ್ಮಿಕ, ಸಾಂಸ್ಕೃತಿಕ ಯಾ ಬೌದ್ಧಿಕ) ಅರಿವು; ಜ್ಞಾನ; ಜ್ಞಾನೋದಯ: found great illumination in the message ಸಂದೇಶದಲ್ಲಿ ಮಹತ್ತರ ಜ್ಞಾನವನ್ನು ಪಡೆದ.
  3. ಬೆಳಕು ನೀಡಿಕೆ; ಪ್ರಕಾಶನ; ಪ್ರಕಾಶಗೊಳಿಸುವಿಕೆ: the brilliant illumination of the room ಕೊಠಡಿಯ ಉಜ್ಜ್ವಲ ಪ್ರಕಾಶನ.
  4. ದೀಪಾಲಂಕಾರ: illumination of the city in celebration of the victory ವಿಜಯೋತ್ಸವಕ್ಕಾಗಿ ನಗರದ ದೀಪಾಲಂಕಾರ.
  5. (ಹಸ್ತಪ್ರತಿಯ) ಸುವರ್ಣಾಲಂಕರಣ; ಹಸ್ತಪ್ರತಿಯ ಅಕ್ಷರ ಮೊದಲಾದವನ್ನು ಚಿನ್ನ, ಬೆಳ್ಳಿ ಯಾ ಇತರ ಉಜ್ಜ್ವಲ ವರ್ಣಗಳಿಂದ ಅಲಂಕರಿಸುವುದು: interested in the illumination of manuscripts ಹಸ್ತಪ್ರತಿಗಳ ಸುವರ್ಣಾಲಂಕರಣದಲ್ಲಿ ಆಸಕ್ತನಾದ.
  6. (ಭೌತವಿಜ್ಞಾನ) ದೀಪನ; ಬೆಳಕಿನ ಪ್ರವಾಹದ ಹಾದಿಯ ಯಾವುದೋ ಬಿಂದುವಿನಲ್ಲಿ ಒಂದು ಏಕಮಾನ ವಿಸ್ತೀರ್ಣದಲ್ಲಿನ ದೀಪಕತೆ (luminous flux).