illuminate ಇಲ್ಯೂ(ಲೂ)ಮಿನೇಟ್‍
ಸಕರ್ಮಕ ಕ್ರಿಯಾಪದ
  1. ಬೆಳಗು; ಬೆಳಗಿಸು; ಪ್ರಕಾಶಗೊಳಿಸು; ಬೆಳಕು ಕೊಡು; ಬೆಳಕು ಮಾಡು: illuminated a picture that hung on the wall ಗೋಡೆಯ ಮೇಲೆ ತೂಗು ಹಾಕಿದ್ದ ಚಿತ್ರವನ್ನು ಬೆಳಗಿಸಿತು.
  2. ಜ್ಞಾನೋದಯ ಉಂಟುಮಾಡು; ಆಧ್ಯಾತ್ಮಿಕವಾದ ಬೆಳಕು ನೀಡು.
  3. (ಬೌದ್ಧಿಕವಾಗಿ) ಪ್ರಬೋಧಿಸು; ಬೆಳಕು ತೋರು: a teacher gifted to illuminate a body of young students ಎಳೆಯ ವಿದ್ಯಾರ್ಥಿ ವೃಂದಕ್ಕೆ ಬೆಳಕು ತೋರುವ ಶಕ್ತಿಯುಳ್ಳ ಉಪಾಧ್ಯಾಯ.
  4. (ವಿಷಯದ ಮೇಲೆ) ಬೆಳಕು ಚೆಲ್ಲು, ಬೀರು; ವಿಶದಪಡಿಸು; ಸ್ಪಷ್ಟಗೊಳಿಸು: illuminated principles of constitutional law ಸಂವಿಧಾನದ ನ್ಯಾಯತತ್ತ್ವಗಳನ್ನು ವಿಶದಪಡಿಸಿದನು.
  5. ಪ್ರಕಾಶ ಬೀರು; ಉಜ್ಜ್ವಲಗೊಳಿಸು; ಬೆಳಗುವಂತೆ ಮಾಡು: the achievements that illuminate that era ಆ ಕಾಲವನ್ನು ಉಜ್ಜ್ವಲಗೊಳಿಸಿದ ಸಾಧನೆಗಳು.
  6. (ಉತ್ಸವ, ಸಂಭ್ರಮಗಳ ಚಿಹ್ನೆಯಾಗಿ ಕಟ್ಟಡಗಳು ಮೊದಲಾದವಕ್ಕೆ) ಯಥೇಚ್ಛವಾಗಿ ದೀಪಾಲಂಕಾರ ಮಾಡು; ದೀಪಗಳಿಂದ ಬೆಳಗಿಸು.
  7. (ಹಸ್ತಪ್ರತಿ ಮೊದಲಾದವಲ್ಲಿ ಅಕ್ಷರ, ಪದ ಯಾ ಪುಟವನ್ನು) ಸುವರ್ಣಾಕ್ಷರಗಳಿಂದ ಅಲಂಕರಿಸು, ಅಂದಗೊಳಿಸು; ಸುವರ್ಣಾಲಂಕಾರ ಮಾಡು; ಚಿನ್ನ, ಬೆಳ್ಳಿ ಯಾ ಇತರ ಉಜ್ಜ್ವಲ ವರ್ಣಗಳಿಂದ ಬೆಳಗಿಸು.