illiberal ಇಲಿಬರಲ್‍
ಗುಣವಾಚಕ
  1. ಸ್ವತಂತ್ರ ವ್ಯಕ್ತಿಗೆ ಯಾ ಪ್ರಜೆಗೆ – ತರವಲ್ಲದ, ಒಪ್ಪದ, ಸಲ್ಲದ, ಯೋಗ್ಯವಲ್ಲದ.
  2. ಅವಿದ್ವಾಂಸ; ಪಾಂಡಿತ್ಯವಿಲ್ಲದ; ಅಶಿಕ್ಷಿತ; ಪಾಮರ; ಸಂಸ್ಕೃತಿ, ಶಿಕ್ಷಣ ಇಲ್ಲದ: illiberal crafts ಪಾಮರ ಕಸಬುಗಳು.
  3. ಗ್ರಾಮ್ಯ; ಒರಟು; ಅಸಭ್ಯ; ಅಸಂಸ್ಕೃತ; ಕೀಳು; ತುಚ್ಛ; ಕ್ಷುದ್ರ; ಹೀನ: illiberal occupation ಕೀಳು ಉದ್ಯೋಗ.
  4. ಸಂಕುಚಿತ ಮನಸ್ಸಿನ; ಮನಸ್ಸು ಧಾರಾಳವಿಲ್ಲದ; ಅಸಹಿಷ್ಣುತೆಯ.
  5. ಜಿಪುಣ; ಜುಗ್ಗ; ಜೀನ; ಕೃಪಣ; ಲೋಭಿ; ಅನುದಾರ; ಧಾರಾಳವಿಲ್ಲದ: an illiberal hand ಧಾರಾಳವಿಲ್ಲದ ಕೈ.