1illegitimate ಇಲಿಜಿಟಿಮಟ್‍
ಗುಣವಾಚಕ
  1. ನ್ಯಾಯ ವಿರುದ್ಧ; ಅಕ್ರಮ(ವಾದ); ನ್ಯಾಯಸಮ್ಮತವಲ್ಲದ; ಕಾನೂನುಬದ್ಧವಲ್ಲದ: an illegitimate seizure of power ಕಾನೂನುಸಮ್ಮತವಲ್ಲದ ಅಧಿಕಾರಾಕ್ರಮಣ.
  2. ತರವಲ್ಲದ; ಸರಿಯಲ್ಲದ; ಅಯುಕ್ತ; ಅನುಚಿತ: a living embodiment of illegitimate curiosity ಅನುಚಿತ ಕುತೂಹಲದ ಜೀವಂತ ಮೂರ್ತಿ.
  3. ರೂಢಿ ವಿರುದ್ಧ; ಬಳಕೆಯಲ್ಲಿಲ್ಲದ: illegitimate usage ಭಾಷೆಯ ಅಪಪ್ರಯೋಗ.
  4. ಜಾರಜ; ಹಾದರಕ್ಕೆ ಹುಟ್ಟಿದ; ಕಾನೂನು ಸಮ್ಮತವಾದ ವಿವಾಹ ಸಂಬಂಧದಿಂದ ಹುಟ್ಟಿರದ: an illegitimate child ಹಾದರದ ಮಗು; ಜಾರಜ.
  5. ತಪ್ಪಾಗಿ ಊಹಿಸಿದ, ಅನುಮಾನಿಸಿದ: illegitimate supposition ತಪ್ಪಾಗಿ ಮಾಡಿದ ಊಹೆ.
  6. ಅಸಹಜ; ವಿಕೃತ; ವಿಲಕ್ಷಣ; ಸ್ವಭಾವಕ್ಕೆ ವ್ಯತಿರಿಕ್ತ; ಸಹಜವಾಗಿಯೇ ಅಸ್ವಾಭಾವಿಕ, ಅಪಸಾಮಾನ್ಯ: these illegitimate plants are not fully fertile ಈ ಅಸಹಜ ಸಸ್ಯಗಳು ಪೂರಾ ಫಲವಂತವಲ್ಲ.
2illegitimate ಇಲಿಜಿಟಿಮಟ್‍
ನಾಮವಾಚಕ

ಕುಂಡ; ಅಡನಾಡಿ; ಜಾರಜ; ಹಾದರಕ್ಕೆ ಹುಟ್ಟಿದವನು; ಕಾನೂನುಸಮ್ಮತ ವಿವಾಹಸಂಬಂಧದಿಂದ ಹುಟ್ಟಿರದವನು: the memoirs of an illegitimate ಜಾರಜನೊಬ್ಬನ ನೆನಪುಗಳು.

3illegitimate ಇಲಿಜಿಟಿಮೇಟ್‍
ಸಕರ್ಮಕ ಕ್ರಿಯಾಪದ

ಜಾರಜೀಕರಿಸು; ಜಾರಜನೆಂದು ಪ್ರಕಟಿಸು; ಕಾನೂನು ಸಮ್ಮತ ವಿವಾಹದಿಂದ ಹುಟ್ಟಿದವನಲ್ಲವೆಂದು ಘೋಷಿಸು; ಹಾದರಕ್ಕೆ ಹುಟ್ಟಿದವನೆಂದು ಸಾರು: testimony that would illegitimate her older son ಅವಳ ದೊಡ್ಡ ಮಗನನ್ನು ಜಾರಜನೆಂದು ಸಾರುವ ರುಜುವಾತು.