ignore ಇಗ್ನೋರ್‍
ಸಕರ್ಮಕ ಕ್ರಿಯಾಪದ
  1. ಕಡೆಗಣಿಸು; ನಿರ್ಲಕ್ಷಿಸು; ಅಲಕ್ಷ್ಯ ಮಾಡು; ಲಕ್ಷ್ಯ ಮಾಡದಿರು; ಪರಿಗಣಿಸದಿರು; ಗಣನೆಗೆ ತಂದುಕೊಳ್ಳದಿರು; ಲೆಕ್ಕಕ್ಕೆ ತೆಗೆದುಕೊಳ್ಳದಿರು: ignore rude remarks ಒರಟು ಟೀಕೆಯನ್ನು ಕಡೆಗಣಿಸು.
  2. (ನ್ಯಾಯದರ್ಶಿ ಮಹಾಮಂಡಲಿಯ ವಿಷಯದಲ್ಲಿ) (ದೋಷಾರೋಪಣೆಯ ದಾವೆಯನ್ನು) ಪುರಸ್ಕರಿಸದಿರು; ಒಪ್ಪದಿರು; ತಳ್ಳಿಹಾಕು.
  3. ಉದ್ದೇಶಪೂರ್ವಕವಾಗಿ ಯಾ ಬುದ್ಧಿಪೂರ್ವಕವಾಗಿ – ಕಡೆಗಣಿಸು, ಉಪೇಕ್ಷಿಸು.