ignorant ಇಗ್ನರಂಟ್‍
ಗುಣವಾಚಕ
  1. ತಿಳಿವಿಲ್ಲದ; ತಿಳುವಳಿಕೆ ಸಾಲದ; ಅರಿವಿಲ್ಲದ: he’s quite ignorant, he can’t even read ಅವನು ಏನೇನೂ ತಿಳಿಯದವನು, ಅವನಿಗೆ ಓದಲೂ ಬಾರದು.
  2. ಗೊತ್ತಿಲ್ಲದ; ಅಜ್ಞಾನದ; ವಿಷಯಜ್ಞಾನವಿಲ್ಲದ: ignorant of his fate ಅವನಿಗೆ ಒದಗುವ ವಿಧಿ ಗೊತ್ತಿಲ್ಲದೆ. ignorant in the business of navigation ಸಮುದ್ರಯಾನದ ವಿಷಯ ಗೊತ್ತಿಲ್ಲದ.
  3. (ತಿಳಿವಳಿಕೆಯಿಲ್ಲದಿರುವುದರಿಂದ) ಅಸಂಸ್ಕೃತ ವರ್ತನೆಯ; ಒರಟು ನಡವಳಿಕೆಯ; ಶಿಷ್ಟಾಚಾರವಲ್ಲದ: ignorant behaviour ಅಸಂಸ್ಕೃತ ನಡವಳಿಕೆಯ.