ignoble ಇಗ್ನೋಬ್‍ಲ್‍
ಗುಣವಾಚಕ
( ತರರೂಪ ignobler, ತಮರೂಪ ignoblest).
  1. ಹೀನ; ಅವರ; ಕೀಳು – ಹುಟ್ಟಿನ, ಜನ್ಮದ, ಸ್ಥಾನದ, ಮಟ್ಟದ, ಯಶಸ್ಸಿನ: ignoble mob ಕೀಳುಮಟ್ಟದ ಜನಜಂಗುಳಿ. ignoble birth ಕೀಳು ಹುಟ್ಟು; ಹೀನ ಜನ್ಮ.
  2. ತುಚ್ಛ; ನೀಚ; ಹೇಯ; ನಿಕೃಷ್ಟ; ಹೀನ; ಕ್ಷುದ್ರ; ಅಲ್ಪ; ಅಧಮ; ಅಪಮಾನಕರ; ಮಾನಗೆಟ್ಟ: an ignoble law ತುಚ್ಛ ಶಾಸನ. ignoble purpose ನೀಚೋದ್ದೇಶ; ಹೀನೋದ್ದೇಶ.