See also 2if
1if ಇಹ್‍
ಸಂಯೋಜಕಾವ್ಯಯ
  1. -ರೆ; -ಇದ್ದರೆ; -ಇದ್ದಲ್ಲಿ; -ಆದಲ್ಲಿ; -ಪಕ್ಷಕ್ಕೆ; -ಪಕ್ಷದಲ್ಲಿ: if you are tired ನೀನು ಬಳಲಿದ್ದರೆ. if you (hereafter) see him, give him the message ಅವನು ನಿನಗೆ (ಮುಂದೆ) ಸಿಕ್ಕರೆ ಈ ಸುದ್ದಿ ಕೊಡು.
  2. (ಅಸಂಭವವಾದ ಸಂದರ್ಭವನ್ನು ಸೂಚಿಸುವಲ್ಲಿ ಯಾವುದೇ ಧಾತುವಿನ ಭೂತರೂಪದೊಡನೆ) – ಒಂದು ವೇಳೆ ಆದರೆ, ಇದ್ದರೆ, ನಡೆದರೆ: if I were you ನಾನೇ ನೀನಾಗಿದ್ದಿದ್ದರೆ; ನಿನ್ನ ಸ್ಥಾನದಲ್ಲಿ ಯಾ ಸ್ಥಿತಿಯಲ್ಲಿ ನಾನು ಇದ್ದಿದ್ದರೆ. if he came tomorrow ನಾಳೆ ಅವನು ಒಂದು ವೇಳೆ ಬಂದರೆ.
  3. ಯಾವಾಗ; ಎಂದಾದರೂ; ಯಾವಾಗಲಾದರೂ: if I feel any doubt ಯಾವಾಗಲಾದರೂ ನನಗೆ ಸಂಶಯ ಬಂದರೆ.
  4. -ಯೋ; -ಯೇ; -ವುದೇ; ಸಾಧ್ಯವೇ: see if you can turn the handle ಹಿಡಿಯನ್ನು ತಿರುಗಿಸಲು ನಿನಗೆ ಆಗುತ್ತದೆಯೇ ನೋಡು.
    1. if ಪದವನ್ನು ಬಿಟ್ಟುಬಿಟ್ಟಾಗ ಕ್ರಿಯಾಪದವು ಕರ್ತೃ ಪದಕ್ಕೆ ಮೊದಲೇ ಬರುತ್ತದೆ, ಉದಾಹರಣೆಗೆ: were in your place (= if I were in your place). would, could, should, might, had he (= if he would, could, should, might, had).
    2. (ಕಾವ್ಯಪ್ರಯೋಗ) loved I not honour more = if I loved not honour more.
  5. (ಬಯಕೆ, ಆಶ್ಚರ್ಯ, ಮೊದಲಾದವುಗಳ ಉದ್ಗಾರಗಳಲ್ಲಿ ವಾಕ್ಯದ ಅನುಗತ ಭಾಗವಿಲ್ಲದೆ): if I only knew! ನನಗೆ ತಿಳಿದಿದ್ದರೆ (ಎಷ್ಟು ಚೆನ್ನಾಗಿತ್ತು)! if I haven’t lost my watch! ನನ್ನ ಗಡಿಯಾರವನ್ನು ನಾನು ಕಳೆದುಕೊಳ್ಳದಿದ್ದರೆ! (ಕಳೆದುಕೊಂಡೆನಲ್ಲಾ ಎಂಬ ಆಶ್ಚರ್ಯದ ಯಾ ಬೇಸರದ ಧ್ವನಿ).
  6. (ವಿನಯದಿಂದ ಬೇಡುವಾಗ) if you wouldn’t mind opening the door? ನೀನು ಏನೂ ತಿಳಿದುಕೊಳ್ಳದಿದ್ದರೆ ದಯಮಾಡಿ ಬಾಗಿಲು ತೆಗೆಯುವೆಯಾ?
  7. ಆದರೂ; ಹಾಗಿದ್ದರೂ; ಆದಾಗ್ಯೂ: a useful if cumbersome device ತೊಡಕಿನದಾದರೂ ಉಪಯುಕ್ತ ಸಲಕರಣೆ.
ಪದಗುಚ್ಛ
  1. as if -ಹಾಗೆ; -ಅಂತೆ; -ಹೇಗೋ ಹಾಗೆ: it seems as if he meant (ಆಡುಮಾತಿನಲ್ಲಿ means ಎಂದು ಪ್ರಯೋಗ) to compromise ಅವನಿಗೆ ರಾಜಿಮಾಡಿಕೊಳ್ಳುವ ಅಭಿಪ್ರಾಯವಿದ್ದ ಹಾಗೆ ತೋರುತ್ತದೆ. he talks as if he were drunk ಅವನು ಕುಡಿದಿದ್ದರೆ ಹೇಗೆ ಮಾತನಾಡುತ್ತಿದ್ದನೋ ಹಾಗೆ (ಯಾ ಕುಡಿದಿದ್ದರೆ ಹೇಗೋ ಹಾಗೆ) ಮಾತನಾಡುತ್ತಾನೆ. as if you didn’t know ನಿನಗೆ ಏನೂ ಗೊತ್ತಿಲ್ಲದಿದ್ದಂತೆ (ನಿನಗೆ ಚೆನ್ನಾಗಿ ಗೊತ್ತು ಎಂಬ ಧ್ವನಿ).
  2. if and when (ಆಗುವ ಸಂಭವವಿದ್ದರೆ) ಆದಾಗ; ಹಾಗಾದಾಗ; ಮುಂದೆ; ಭವಿಷ್ಯದಲ್ಲಿ.
  3. if any ಯಾವುದಾದರೂ ಯಾ ಯಾವುವಾದರೂ ಇದ್ದಲ್ಲಿ.
  4. if anything = ನುಡಿಗಟ್ಟು \((3)\).
  5. if at all
    1. ಪ್ರಾಯಶಃ ಇಲ್ಲವೇ ಇಲ್ಲ.
    2. ಅಂತಾದರೂ, ಹಾಗಾದರೂ – ಇಲ್ಲ.
  6. if not ಹಾಗಿರದಿದ್ದರೆ; ಅಂತಿರದಿದ್ದಲ್ಲಿ.
  7. if only because (ಬೇರೆ ಯಾವುದೇ ಕಾರಣಕ್ಕಾಗಿ ಆಗದಿದ್ದರೂ) ಆ ಕಾರಣಕ್ಕಾಗಿ; ಅದಕ್ಕಾಗಿ.
  8. if only to = ನುಡಿಗಟ್ಟು \((7)\).
  9. if so ಹಾಗಿದ್ದರೆ; ಅಂತಿದ್ದಲ್ಲಿ.
  10. if then = ನುಡಿಗಟ್ಟು \((9)\).
See also 1if
2if ಇಹ್‍
ನಾಮವಾಚಕ

-ರೆ; ಸಂದರ್ಭ; ಎಣಿಕೆ; ಊಹೆ; ಆದರೆ: if ifs and ans were pots and pans ಆದರೆ ಗೀದರೆಗಳೆಲ್ಲ ಕುಡಿಕೆ ಕಾವಲಿಗಳಾಗಿದ್ದಿದ್ದರೆ; ಎಣಿಕೆ ಬಯಕೆಗಳೇನೇ ಚವರಿಗೆ ತಳಿಗೆಗಳಾಗಿದ್ದಿದ್ದರೆ. too many ifs about it ಅದರಲ್ಲಿ ತುಂಬ ಆದರೆ ಗೀದರೆಗಳಿವೆ.

IF
ಸಂಕ್ಷಿಪ್ತ

intermediate frequency.