idol ಐಡಲ್‍
ನಾಮವಾಚಕ
  1. (ಪೂಜೆಗಾಗಿ ಬಳಸುವ) ದೇವತಾ – ವಿಗ್ರಹ, ಮೂರ್ತಿ, ಪ್ರತಿಮೆ.
  2. ಮಿಥ್ಯಾ ದೇವತೆ; ಹುಸಿದೈವ.
  3. ಅತ್ಯಂತ ಪೂಜ್ಯ ಯಾ ಆರಾಧ್ಯ – ವ್ಯಕ್ತಿ, ವಸ್ತು; ಪರಮಾದರಕ್ಕೆ ಪಾತ್ರನಾ(ವಾ)ದ ಯಾ ಅಚ್ಚುಮೆಚ್ಚಿನ – ವ್ಯಕ್ತಿ, ವಸ್ತು: a hero who was the idol of his army ಅವನು ಸೇನೆಯ ಆರಾಧ್ಯ ವ್ಯಕ್ತಿಯಾಗಿದ್ದ ವೀರ.
  4. (ಪ್ರಾಚೀನ ಪ್ರಯೋಗ) ಭ್ರಮೆ; ಭ್ರಾಂತಿ: so many idols and phantoms of their imagination ಅವರ ಕಲ್ಪನೆಯ ಎಷ್ಟೋ ಭ್ರಮೆ, ಭ್ರಾಂತಿಗಳು.
  5. (ತರ್ಕಶಾಸ್ತ್ರ) ಮಿಥ್ಯಾಕಲ್ಪನೆ; ತರ್ಕದೋಷ; ತರ್ಕಾಭಾಸ.
ಪದಗುಚ್ಛ

idols of the tribe, cave, market, theatre (ಹ್ರಾನ್ಸಿಸ್‍ ಬೇಕನ್‍ ವರ್ಗೀಕರಿಸಿರುವ) ಮನಸ್ಸಿನ ಇತಿಮಿತಿಗಳಿಂದ, ವ್ಯಕ್ತಿ ವೈಲಕ್ಷಣ್ಯದ ಪೂರ್ವಗ್ರಹಗಳಿಂದ, ಪದಗಳ ಪ್ರಭಾವದಿಂದ, ತಾತ್ತ್ವಿಕ ಮತ್ತು ತಾರ್ಕಿಕ ಒಲವುಗಳಿಂದ ಹುಟ್ಟುವ – (ನಾಲ್ಕು ಬಗೆಯ) ತರ್ಕಾಭಾಸಗಳು ಯಾ ಮಿಥ್ಯಾಕಲ್ಪನೆಗಳು.