See also 2idle
1idle ಐಡ್‍ಲ್‍
ಗುಣವಾಚಕ
( ತರರೂಪ idleer, ತಮರೂಪ idleest).
  1. (ಕಾರ್ಯ, ಯೋಚನೆ, ಮಾತು – ಇವುಗಳ ವಿಷಯದಲ್ಲಿ) ನಿಷ್ಫಲ; ನಿರರ್ಥಕ; ಅಪ್ರಯೋಜಕ; ವ್ಯರ್ಥ: idle theorizing ವ್ಯರ್ಥ, ನಿರರ್ಥಕ – ವಾದ (ಮಾಡುವುದು).
  2. ಆಧಾರವಿಲ್ಲದ; ನಿರಾಧಾರ: an idle rumour ನಿರಾಧಾರವಾದ ವದಂತಿ.
  3. ಒಣ; ಶುಷ್ಕ; ಬರಡು; ಕೆಲಸಕ್ಕೆ ಬಾರದ; ನಿರುಪಯುಕ್ತ: idle chatter ಕಾಡುಹರಟೆ; ಕೆಲಸಕ್ಕೆ ಬಾರದ ಹರಟೆ.
  4. (ಮನುಷ್ಯರ ವಿಷಯದಲ್ಲಿ) ಕೆಲಸವಿಲ್ಲದ; ನಿರುದ್ಯೋಗಿ; ಉದ್ಯೋಗವಿಲ್ಲದ.
  5. (ವಸ್ತು, ಸ್ಥಳ, ಮೊದಲಾದವುಗಳ ವಿಷಯದಲ್ಲಿ) ಬಳಸದೆ ಬಿಟ್ಟ; ಅನುಪಯುಕ್ತ; ಹಾಳುಬಿದ್ದ; ಪಾಳುಬಿದ್ದ: idle tenements ವಾಸವಿಲ್ಲದ ನಿವಾಸಗಳು. idle capital ದುಡಿಯದ ಬಂಡವಾಳ; ಅನುತ್ಪಾದಕ ಬಂಡವಾಳ.
  6. ಸೋಮಾರಿಯಾದ; ಮೈಗಳ್ಳನಾದ: idle boys in the street ಬೀದಿಯಲ್ಲಿಯ ಮೈಗಳ್ಳ ಹುಡುಗರು.
  7. ಬಳಸುತ್ತಿಲ್ಲದ; ನಿಷ್ಕ್ರಿಯ; ಕೆಲಸ ಮಾಡುತ್ತಿಲ್ಲದ: idle machinery ಕೆಲಸ ಮಾಡುತ್ತಿಲ್ಲದ ಯಂತ್ರ.
  8. (ಕಾಲ ಮೊದಲಾದವುಗಳ ವಿಷಯದಲ್ಲಿ) ಕೆಲಸವಿರದ; ವಿರಾಮದ.
  9. ಬರಿಯ; ಕೇವಲ; ಪರಿಣಾಮಕಾರಿಯಲ್ಲದ; ಪೊಳ್ಳು: idle threats ಬರಿಯ ಬೆದರಿಕೆ.
See also 1idle
2idle ಐಡ್‍ಲ್‍
ಸಕರ್ಮಕ ಕ್ರಿಯಾಪದ
  1. (ಕಾಲ ಮೊದಲಾದವನ್ನು) ವ್ಯಯಮಾಡು; ಸೋಮಾರಿತನದಲ್ಲಿ ಕಳೆ; ವ್ಯರ್ಥವಾಗಿ ಕಳೆದುಬಿಡು.
  2. ಕೆಲಸವಿಲ್ಲದಂತೆ ಮಾಡು; ಸೋಮಾರಿಯಾಗಿಸು: the strike idled many workers ಮುಷ್ಕರವು ಅನೇಕ ಕಾರ್ಮಿಕರನ್ನು ಸೋಮಾರಿಗಳನ್ನಾಗಿ ಮಾಡಿತು.
ಅಕರ್ಮಕ ಕ್ರಿಯಾಪದ
  1. ಸೋಮಾರಿಯಾಗಿರು; ಕೆಲಸ ಮಾಡದಿರು; ಕೆಲಸವಿಲ್ಲದಿರು.
  2. (ಮೋಟಾರು ಕಾರು, ವಿಮಾನ, ಮೊದಲಾದವುಗಳ ಎಂಜಿನ್ನಿನ ವಿಷಯದಲ್ಲಿ) ವೃಥಾ ಓಡು; ನಿರರ್ಥಕವಾಗಿ ಕೆಲಸಮಾಡು; ವ್ಯರ್ಥವಾಗಿ, ಸುಮ್ಮನೆ, ನಿಧಾನವಾಗಿ ಸುತ್ತುತ್ತಿರು, ತಿರುಗುತ್ತಿರು.
  3. ಸೋಮಾರಿಯಾಗಿ ತಿರುಗು, ಠಳಾಯಿಸು, ಅಡ್ಡಾಡು: idling in the garden ತೋಟದಲ್ಲಿ ಕೆಲಸವಿಲ್ಲದೆ ಅಡ್ಡಾಡುತ್ತಾ.