idiom ಇಡಿಅಮ್‍
ನಾಮವಾಚಕ
  1. (ಒಂದು ಜನದ, ದೇಶದ) ಭಾಷೆ; ನುಡಿ.
  2. ಭಾಷಾವೈಶಿಷ್ಟ್ಯ; ಭಾಷೆಯ ಯಾ ನುಡಿಯ ವೈಲಕ್ಷಣ್ಯ.
  3. ನುಡಿಗಟ್ಟು; ಭಾಷಾಸಂಪ್ರದಾಯ; ಭಾಷಾಮರ್ಯಾದೆ; ಭಾಷೆಯ ಜಾಯಮಾನ; ಒಂದು ಭಾಷೆಯ ಯಾ ವ್ಯಕ್ತಿಯ ವಿಶಿಷ್ಟ ಲಕ್ಷಣವಾಗಿರುವ ಭಾಷಾಪ್ರಯೋಗದ ರೀತಿ, ಲಕ್ಷಣ, ಪದ್ಧತಿ.
  4. ನುಡಿಗಟ್ಟು; ಯಾವ ಪದಪುಂಜವೊಂದರ ಅರ್ಥವು ಅದರಲ್ಲಿ ಸೇರಿರುವ ಪ್ರತ್ಯೇಕ ಪದಗಳ ಅರ್ಥಗಳ ಸಂಯೋಗದಿಂದ ಜನಿಸಿರದೆ, ಅವುಗಳಿಗಿಂತ ಭಿನ್ನವಾದ ಒಟ್ಟರ್ಥವೊಂದನ್ನು ನೀಡುತ್ತ, ಭಾಷೆಯ ರೂಢಿಪ್ರಯೋಗಕ್ಕೆ ಸಮ್ಮತವಾಗಿರುತ್ತದೆಯೋ ಅಂಥ ಪದಪುಂಜ.