ideology ಐ(ಇ)ಡಿಆಲಜಿ
ನಾಮವಾಚಕ
  1. (ಪ್ರಾಚೀನ ಪ್ರಯೋಗ) ಭಾವನಾಶಾಸ್ತ್ರ; ಭಾವನೆಗಳ, ವಿಚಾರಗಳ ಉತ್ಪತ್ತಿ, ಲಕ್ಷಣ, ಸ್ವಭಾವಗಳನ್ನು ಕುರಿತ ಶಾಸ್ತ್ರ.
  2. ಭಾವನಾತ್ಮಕ ಊಹೆ, ಚಿಂತನೆ, ಕಲ್ಪನೆ.
  3. (ಒಬ್ಬ ವ್ಯಕ್ತಿಯ ಯಾ ವರ್ಗದ) ಚಿಂತನ ಮಾರ್ಗ; ಆಲೋಚನಾಸರಣಿ; ಯೋಚನಾವಿಧಾನ.
  4. ಸಿದ್ಧಾಂತ; ತತ್ತ್ವ; ವಾದ; ಯಾವುದೇ ಆರ್ಥಿಕ ಯಾ ರಾಜಕೀಯ ವಾದದ ಯಾ ವ್ಯವಸ್ಥೆಯ ಮೂಲಭೂತ ಭಾವನೆಗಳು: Fascist ideology ಹ್ಯಾಸಿಸ್ಟ್‍ ಸಿದ್ಧಾಂತ. Marxist ideology ಮಾರ್ಕ್ಸ್‍ವಾದ.