identity ಐಡೆಂಟಿಟಿ
ನಾಮವಾಚಕ
  1. ಅನನ್ಯತೆ; ಅಭಿನ್ನತೆ; ಅಭೇದ; ಅದೇ ಆಗಿರುವುದು; ಬೇರೆಯಲ್ಲದಿರುವುದು; ಒಂದೇ ಆಗಿರುವುದು: the identity of the fingerprints on the gun proved that he was the killer ಬಂದೂಕಿನ ಮೇಲಿದ್ದ ಕೈಬೆರಳಿನ ಗುರುತುಗಳು (ಅವನ ಬೆರಳು ಗುರುತುಗಳೂ) ಒಂದೇ ಆಗಿದ್ದುದು ಅವನು ಹಂತಕನೆಂಬುದನ್ನು ರುಜುವಾತು ಮಾಡಿತು.
  2. ಸ್ವವ್ಯಕ್ತಿತ್ವ; ಸ್ವಸ್ವರೂಪ: he doubted his own identity ಅವನು ಸ್ವಸ್ವರೂಪದ ಬಗೆಗೇ ಸಂಶಯ ಪಟ್ಟ.
  3. (ವ್ಯಕ್ತಿ, ವಸ್ತು, ಮೊದಲಾದವುಗಳ) ಗುರುತು; ಚಹರೆ: identity disc ಗುರುತಿಸುವ ಬಿಲ್ಲೆ.
  4. (ಬೀಜಗಣಿತ) ಅನನ್ಯತೆ; ಬೀಜಗಣಿತ ಸಂಕೇತದ ಎಲ್ಲ ಮೌಲ್ಯಗಳಿಗೂ ಸಿಂಧುವಾಗಿರುವ ಸಮೀಕರಣ, ಉದಾಹರಣೆಗೆ $(x+1)^2=x^2+2x+1$.
  5. (ಗಣಿತ) ತಾದಾತ್ಮ್ಯ; ಅನನ್ಯತೆ; (ಯಾವುದೇ ಪರಿಕರ್ಮಕ್ಕೆ ಸಂಬಂಧಿಸಿದಂತೆ) ಗಣದ ಇತರ ಧಾತುಗಳೊಡನೆ ವರ್ತಿಸಿ ಅವುಗಳನ್ನು ಬದಲಾಯಿಸದೆ ಹಾಗೆಯೇ ಉಳಿಸುವ ಧಾತು.