identify ಐಡೆಂಟಿಹೈ
ಸಕರ್ಮಕ ಕ್ರಿಯಾಪದ
  1. ತಾದಾತ್ಮ್ಯಗೊಳಿಸು; (ವಸ್ತುವೊಂದನ್ನು) (ಮತ್ತೊಂದರೊಡನೆ) ಅಭಿನ್ನವೆಂದು, ಒಂದೇ ಎಂದು, ಅನನ್ಯವೆಂದು, ಬೇರೆಯಲ್ಲವೆಂದು-ಪರಿಗಣಿಸು, ಪ್ರತಿಪಾದಿಸು.
  2. (ವ್ಯಕ್ತಿಗೆ ತನಗೆ ಪಕ್ಷ, ನೀತಿ, ಮೊದಲಾದವುಗಳೊಡನೆ) ಬೇರ್ಪಡಿಸಲಾಗದಂತೆ ಅಥವಾ ಬಹಳ ನಿಕಟವಾಗಿ – ಸಂಬಂಧ ಹೊಂದಿಸು, ಸಂಪರ್ಕ ಕಲ್ಪಿಸು: he refused to identify himself with the new policy ಹೊಸ ಧೋರಣೆಯೊಂದಿಗೆ ಸಂಬಂಧ ಹೊಂದಿರಲು ಅವನು ನಿರಾಕರಿಸಿದ.
  3. ಗುರುತಿಸು; ಸ್ವರೂಪ ಪತ್ತೆಹಚ್ಚು: can you identify your watch? ನಿನ್ನ ಗಡಿಯಾರವನ್ನು ಗುರುತಿಸಬಲ್ಲೆಯಾ?
  4. ಪರಿಶೀಲಿಸಿ ಯಾ ಪರೀಕ್ಷಿಸಿ – ಗುರುತಿಸು, ಆಯು, ಆಯ್ಕೆ ಮಾಡು: identify the best method of producing steel ಉಕ್ಕನ್ನು ತಯಾರಿಸುವ ಶ್ರೇಷ್ಠ ವಿಧಾನವನ್ನು ಗುರುತಿಸು, ಆಯು.
ಅಕರ್ಮಕ ಕ್ರಿಯಾಪದ
  1. (ಒಂದರೊಡನೆ) ಸಂಬಂಧ, ಸಂಪರ್ಕ, ಸಹಯೋಗ-ಪಡೆ.
  2. (ಇನ್ನೊಬ್ಬ ವ್ಯಕ್ತಿಯೊಡನೆ) ಸಮಾನ ಗುಣಗಳನ್ನು ಹೊಂದಿರುವುದಾಗಿ ಭಾವಿಸಿಕೊ.